ಕಳೆದ ಕೆಲ ವಾರಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗ್ತಿದೆ. ಆದರೆ ಭಾನುವಾರದ ಬುಲೆಟಿನ್ನಲ್ಲಿ ಪ್ರಕಟವಾದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರ ಶೇ.60ರಷ್ಟು ಪಾಲನ್ನ ತನ್ನದಾಗಿಸಿಕೊಳ್ಳುವ ಮೂಲಕ ಸಿಟಿ ಮಂದಿಗೆ ಆಘಾತ ಉಂಟು ಮಾಡಿದೆ.
ಭಾನುವಾರದ ಕೊರೊನಾ ಹೆಲ್ತ್ ಬುಲೆಟಿನ್ನಲ್ಲಿ ರಾಜ್ಯದಲ್ಲಿ ಹೊಸ ಸೋಂಕಿತರ ಸಂಖ್ಯೆ 3652 ದಾಖಲಾಗಿದೆ. ಇದರಲ್ಲಿ 2167 ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಇನ್ನುಳಿದಂತೆ ಮೈಸೂರಿನಲ್ಲಿ 147, ಹಾಸನದಲ್ಲಿ 144 ಹಾಗೂ ತುಮಕೂರಿನಲ್ಲಿ 104 ಹೊಸ ಕೇಸ್ಗಳು ದಾಖಲಾಗಿವೆ.
ಭಾನುವಾರದ ಬುಲೆಟಿನ್ನಲ್ಲಿ 24 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಅಂತಾ ವರದಿಯಾಗಿದೆ. ಮೃತರಲ್ಲಿ 10 ಮಂದಿ ಬೆಂಗಳೂರಿನವರಾಗಿದ್ದಾರೆ. ಕಳೆದ 10 ದಿನಗಳಲ್ಲಿ ಮಹದೇವಪುರ ವಲಯದಲ್ಲಿ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇ.19ರಷ್ಟು ಏರಿಕೆ ಕಂಡಿದೆ. ಇನ್ನುಳಿದಂತೆ ದಕ್ಷಿಣ ವಲಯದಲ್ಲಿ 15 ಪ್ರತಿಶತ ಹಾಗೂ ಬೊಮ್ಮನಹಳ್ಳಿ, ಪಶ್ಚಿಮ ವಲಯಗಳಲ್ಲಿ ಶೇ.14ರಷ್ಟು ಕೊರೊನಾ ಕೇಸ್ ದಾಖಲಾಗಿವೆ.