ಯುಕೆಯ ಕೈಗಾರಿಕಾ ಪ್ರದೇಶದಲ್ಲಿದ್ದ ಭಾರೀ ಗಾತ್ರದ ಡ್ರೈಯರ್ ಒಳಗೆ ಸಿಲುಕಿಕೊಂಡಿದ್ದ ಮೂವರನ್ನ ರಕ್ಷಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮೂವರು ಯುವಕರು ಬೆಳ್ಳಂ ಬೆಳಗ್ಗೆಯೇ ದೊಡ್ಡ ಲಾಂಡ್ರಿ ಕೈಗಾರಿಕಾ ಕಟ್ಟಡಕ್ಕೆ ಎಂಟ್ರಿ ಕೊಟ್ಟಿದ್ದು ಭಾರೀ ಗಾತ್ರದ ಡ್ರೈಯರ್ ಒಳಗೆ ಸಿಲುಕಿದ್ದಾರೆ.
ಇದರಲ್ಲಿ ಇಬ್ಬರು ಸ್ಥಳದಿಂದ ಹೊರಬರುವಲ್ಲಿ ಯಶಸ್ವಿಯಾದ್ರೆ ಒಬ್ಬ ಮಾತ್ರ ಡ್ರೈಯರ್ ಒಳಗೆ ಸಿಲುಕಿಕೊಂಡಿದ್ದ ಎನ್ನಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಎಸೆಕ್ಸ್ ಕೌಂಟಿ ಅಗ್ನಿಶಾಮಕ ದಳ ತಂಡ ಯುವಕರನ್ನ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೂವರಲ್ಲಿ ಓರ್ವನ ಕಾಲು ಟಂಬ್ಲರ್ ಒಳಗೆ ಸಿಲುಕಿಹಾಕಿಕೊಂಡಿದ್ದು ಆತನನ್ನ ರಕ್ಷಣೆ ಮಾಡಲಾಗಿದೆ ಅಂತಾ ಅಗ್ನಿಶಾಮಕ ದಳ ಇಲಾಖೆ ಮಾಹಿತಿ ನೀಡಿದೆ. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಮೂವರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ವೈದ್ಯಕೀಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ.