![](https://kannadadunia.com/wp-content/uploads/2020/11/933660-879008-cylinder-price-hike-1.jpg)
ಒಂದು ಕಡೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದರೆ, ಮತ್ತೊಂದು ಕಡೆ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟುತ್ತಿದೆ. ಇದೀಗ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ಕಂಡಿದ್ದು ಇದು ಬಳಕೆದಾರರಿಗೆ ನುಂಗಲಾರದ ತುತ್ತಾಗಿದೆ.
ಹೌದು, 19 ಕೆಜಿಯ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗಿದೆ. ಸುಮಾರು 75 ರೂಪಾಯಿಗಳನ್ನು ಏರಿಕೆ ಮಾಡಲಾಗಿದೆ. ಪ್ರಸ್ತುತ ಇದರ ಬೆಲೆ 1241ರೂಪಾಯಿ ಇದೆ. ಇನ್ನು ಬೇರೆ ಬೇರೆ ಮಹಾನಗರಗಳಲ್ಲಿ ಏರಿಕೆಯಾದ ಬೆಲೆಯಲ್ಲಿ ಕೊಂಚ ವ್ಯತ್ಯಾಸವಿದೆ. ದೆಹಲಿಯಲ್ಲಿ 1241 ರೂಪಾಯಿ, ಮುಂಬೈನಲ್ಲಿ 1189 ರೂಪಾಯಿ, ಕೊಲ್ಕತ್ತಾದಲ್ಲಿ 1296 ರೂಪಾಯಿ, ಹಾಗೂ ಚೆನ್ನೈನಲ್ಲಿ 1354 ರೂಪಾಯಿ ಇದೆ.
ಇನ್ನು ಈ ನೂತನ ಬೆಲೆ ಜಾರಿಗೆ ಬಂದಿದ್ದು, ಕಮರ್ಷಿಯಲ್‌ಗಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬಳಸುತ್ತಿದ್ದವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈ ಬೆಲೆ ಏರಿಕೆ ಕಮರ್ಷಿಯಲ್ ಸಿಲಿಂಡರ್‌ಗಳ ಬಳಕೆದಾರರಿಗೆ ಮಾತ್ರ. ಇತ್ತ 14.2 ಕೆಜಿ ತೂಕದ ಡೊಮೆಸ್ಟಿಕ್ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಕೆಯಾಗಿಲ್ಲ. ಮೊದಲು ಎಷ್ಟು ದರವಿತ್ತೋ ಅಷ್ಟೇ ದರವಿದೆ.