ನವದೆಹಲಿ: ಕೊರೋನಾ ಸೋಂಕು ತಡೆಗೆ ಆಯುರ್ವೇದ ಔಷಧ ಪರಿಣಾಮಕಾರಿಯಾಗಿದೆ ಎನ್ನುವುದು ಪ್ರಯೋಗದಲ್ಲಿ ತಿಳಿದು ಬಂದಿದೆ.
ಈ ಹಿಂದೆಯೇ ಕೊರೋನಾ ತಡೆಗೆ ಆಯುರ್ವೇದ ಪರಿಣಾಮಕಾರಿ ಎಂದು ಹೇಳಲಾಗಿತ್ತು ದೆಹಲಿಯಲ್ಲಿ ಈ ನಿಟ್ಟಿನಲ್ಲಿ ನಡೆದ ಪ್ರಯೋಗ ಯಶಸ್ವಿಯಾಗಿದೆ. ಕೇವಲ ಆರೇ ದಿನದಲ್ಲಿ ಸೋಂಕಿತರಿಗೆ ನೆಗೆಟಿವ್ ವರದಿ ಬಂದಿದೆ.
ಆರಂಭಿಕ ಹಂತ, ಗಂಭೀರವಲ್ಲದ ಕೊರೋನಾ ಸೋಂಕಿತ ಪ್ರಕರಣಗಳಲ್ಲಿ ಆಯುರ್ವೇದ ಚಿಕಿತ್ಸಾ ವಿಧಾನ ಪರಿಣಾಮಕಾರಿಯಾಗಿದೆ. ದೆಹಲಿಯ ಅಖಿಲ ಭಾರತ ಆಯುರ್ವೇದ ವೈದ್ಯಕೀಯ ವಿಜ್ಞಾನ ಸಂಸ್ಥೆ ವೈದ್ಯರ ತಂಡ ಈ ಬಗ್ಗೆ ಮಾಹಿತಿ ನೀಡಿದೆ.
ಆಯುಷ್ ಚಿಕಿತ್ಸಾ ಕ್ರಮಗಳ ಬಳಕೆಯಿಂದ ಕೊರೋನಾ ಸೋಂಕಿತನ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡಿದೆ. 6 ದಿನದಲ್ಲೇ ಆಯುರ್ವೇದ ಚಿಕಿತ್ಸೆ ಬಳಿಕ ನೆಗೆಟಿವ್ ರಿಪೋರ್ಟ್ ಬಂದಿದೆ. ಆಯುಷ್ ಕ್ವಾಥ, ಸಂಶಮನಿಪತಿ, ಫಿಫಾಟ್ರಾಲ್ ಮಾತ್ರೆ, ಲಕ್ಷ್ಮಿ ವಿಲಾಸ ರಸಗಳ ಬಳಕೆ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ.