ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬರಲು ಘೋಷಣೆ ಮಾಡಲಾಗಿರುವ ಐದನೇ ಹಂತದ ಅನ್‌ಲಾಕ್ ಪ್ರಕ್ರಿಯೆಯು ನವೆಂಬರ್ 30ರ ವರೆಗೆ ವಿಸ್ತರಿಸಲಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕಂಟೇನ್ಮೆಂಟ್ ವಲಯಗಳ ಹೊರಗಿರುವ ಸಿನೆಮಾ ಹಾಲ್‌ಗಳು, ಶಾಲೆಗಳಂಥ ಸಾರ್ವಜನಿಕ ಸ್ಥಳಗಳನ್ನು ಮರು ಆರಂಭಿಸಲು ಅನುವು ಮಾಡಿಕೊಡುವ ಈ ಐದನೇ ಹಂತದ ಅನ್‌ಲಾಕ್ ಪ್ರಕ್ರಿಯೆಗೆ ಸೆಪ್ಟೆಂಬರ್ 30ರಂದು ಚಾಲನೆ ಕೊಡಲಾಗಿದೆ.
ಇದೇ ವೇಳೆ ಅಂತರ ರಾಜ್ಯ ಸಂಚಾರದ ಮೇಲೆ ರೀತಿಯ ನಿರ್ಬಂಧ ಇರುವುದಿಲ್ಲ. ಇದಕ್ಕಾಗಿ ಯಾವುದೇ ವಿಶೇಷ ಅನುಮತಿಯ ಅಗತ್ಯವಿಲ್ಲ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಅಂತಾರಾಷ್ಟ್ರೀಯ ವಿಮಾನಯಾನದ ಮೇಲಿದ್ದ ನಿರ್ಬಂಧವನ್ನು, ಕೆಲವು ಮಾರ್ಗಗಳಿಗೆ ಹೊರತುಪಡಿಸಿ, ನವೆಂಬರ್ 30ರ ವರೆಗೂ ಮುಂದುವರೆಸಲಾಗುವುದು.
ಸಿನೆಮಾಗಳು, ಥಿಯೇಟರುಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳನ್ನು ಅವುಗಳ 50% ಸಾಮರ್ಥ್ಯದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮನರಂಜನಾ ಉದ್ಯಾನಗಳು ಹಾಗೂ ಇಂಥದ್ದೇ ಇತರ ಪ್ರದೇಶಗಳು ಸಹ ಮುಕ್ತವಾಗಲಿವೆ.