ಬೆಂಗಳೂರು: ಮದ್ಯ ಸೇವನೆ ಮಾಡುವವರಿಗೆ ಆಘಾತಕಾರಿ ಮಾಹಿತಿ ಇಲ್ಲಿದೆ. ಮದ್ಯ ಸೇವನೆ ಮಾಡುವವರಿಗೆ ಕೊರೋನಾ ಸೋಂಕು ತಗುಲಿದಲ್ಲಿ ಹೆಚ್ಚಿನ ಅಪಾಯವಾಗುವ ಸಾಧ್ಯತೆ ಇದೆ.
ಮದ್ಯ ಸೇವನೆಯಿಂದ ಕೊರೋನಾ ವೈರಸ್ ಸಾಯುತ್ತದೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ, ಮದ್ಯಸೇವನೆ ಮಾಡುವವರ ಮೇಲೆ ಕೊರೋನಾ ಗಂಭೀರ ಪರಿಣಾಮ ಉಂಟು ಮಾಡುತ್ತದೆ ಎನ್ನಲಾಗಿದೆ.
ಮದ್ಯ ಸೇವಿಸುವವರಿಗೆ ಕೊರೊನಾದಿಂದ ಗಂಭೀರ ಸಮಸ್ಯೆ ಎದುರಾಗಲಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಲಿವರ್ ಕೊರೋನಾ ಮೇಲೆ ಪ್ರಭಾವ ಅಪಾರವಾಗಿರುತ್ತದೆ. ಸೋಂಕಿನಿಂದ ಮೃತಪಟ್ಟ ಕೆಲವರಲ್ಲಿ ಲಿವರ್ ಸಮಸ್ಯೆ ಕಂಡುಬಂದಿದೆ.
ಮದ್ಯಪಾನ ಮಾಡುವವರಿಗೆ ವೈದ್ಯರು ಎಚ್ಚರಿಕೆ ನೀಡಿದ್ದು, ಸೋಂಕಿತರ ಲಿವರ್ ಮೇಲಾಗುವ ಪರಿಣಾಮದ ಬಗ್ಗೆ ತಿಳಿಸಿದ್ದಾರೆ. ಶ್ವಾಸಕೋಶದೊಂದಿಗೆ ವಿವಿಧ ಅಂಗಗಳ ಮೇಲೆಯೂ ಕೊರೋನಾವೈರಸ್ ಪರಿಣಾಮ ಬೀರುತ್ತದೆ. ಮದ್ಯಪಾನ ಮಾಡುವವರಿಗೆ ಕೊರೊನಾ ಸೋಂಕು ತಗುಲಿದ್ದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗಿದೆ.