ಬ್ಯಾಂಕ್ ಗಳ ಎಟಿಎಂ ಕಾರ್ಡ್ ಗಳು ಕಳೆದು ಹೋದ್ರೆ ಅಥವಾ ಕಳ್ಳತನವಾದ್ರೆ ತಕ್ಷಣ ಕಾರ್ಡ್ ನಿರ್ಬಂಧಿಸಲಾಗುತ್ತದೆ. ಇದ್ರಿಂದ ಮೋಸವಾಗುವುದನ್ನು ತಡೆಯಬಹುದು. ಎಸ್.ಬಿ.ಐ. ಬ್ಯಾಂಕ್, ಎಟಿಎಂ ಕಾರ್ಡ್ ನಿರ್ಬಂಧಿಸಲು ಕೆಲವು ವಿಧಾನಗಳನ್ನು ನೀಡಿದೆ.
ಎಸ್‌ಬಿಐ ಎಟಿಎಂ ಕಾರ್ಡ್ ಕಳೆದುಕೊಂಡ ವೇಳೆ ಕರೆ ಮಾಡಿ, ಎಸ್‌ಎಂಎಸ್ ಮಾಡಿ, ನೆಟ್‌ಬ್ಯಾಂಕಿಂಗ್ ಮೂಲಕ, ಎಸ್‌ಬಿಐ ಯೋನೊ ಆ್ಯಪ್ ಮೂಲಕ ಮತ್ತು ಎಸ್‌ಬಿಐ ವೆಬ್‌ಸೈಟ್ ಮೂಲಕ ನಿರ್ಬಂಧಿಸಬಹುದು. ಎಸ್.ಬಿ.ಐ. ಹೆಲ್ಫ್ ಲೈನ್ ನಂಬರ್ 24 ಗಂಟೆ ಚಾಲ್ತಿಯಲ್ಲಿರುತ್ತದೆ. ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಬ್ಲಾಕ್ ಮಾಡಬಹುದು. 1800 11 2211, 1800 425 3800 ಅಥವಾ 080 2659 9990 ನಂಬರ್ ಗೆ ಕರೆ ಮಾಡಬೇಕು.
ಆನ್ಲೈನ್ ಮೂಲಕ ಕೂಡ ಕಾರ್ಡ್ ಬ್ಲಾಕ್ ಮಾಡಬಹುದು. ಗ್ರಾಹಕರು ಮೊದಲು www.onlinesbi.comಗೆ ಲಾಗಿನ್ ಮಾಡಬೇಕು. ಅಲ್ಲಿ ಎಟಿಎಂ ಕಾರ್ಡ್ ನಿರ್ಬಂಧ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಬ್ಯಾಂಕ್ ಖಾತೆ ನಂಬರ್ ಆಯ್ಕೆ ಮಾಡಿ, ನಂತ್ರ ಕಾರ್ಡ್ ಸಂಖ್ಯೆಯನ್ನು ಹಾಕಿ ಕಾರ್ಡ್ ಬ್ಲಾಕ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಒಮ್ಮೆ ನಿಮ್ಮ ಕಾರ್ಡ್ ಬ್ಲಾಕ್ ಆದ ನಂತ್ರ ಆ ಕಾರ್ಡ್ ಮತ್ತೆ ಬಳಕೆಗೆ ಬರುವುದಿಲ್ಲ. ನೀವು ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್ಲೈನ್ ನಲ್ಲಿಯೇ ನೀವು ಅರ್ಜಿ ಸಲ್ಲಿಸಬಹುದು. www.onlinesbi.com ಗೆ ಲಾಗಿನ್ ಆಗಬೇಕು. ಎಟಿಎಂ, ಡೆಬಿಟ್ ಕಾರ್ಡ್ ವಿನಂತಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಎಸ್ಎಂಎಸ್ ಒಟಿಪಿ ಆಯ್ಕೆ ಮಾಡಿ, ಮುಂದಿನ ಪುಟ ತೆರೆಯುತ್ತಿದ್ದಂತೆ ಬ್ಯಾಂಕ್ ಖಾತೆ ನಂಬರ್ ನಮೂದಿಸಬೇಕು. ಕಾರ್ಡ್ ಮುದ್ರಿಸಲು ಬೇಕಾದ ಹೆಸರನ್ನು ನಮೂದಿಸಬೇಕು. ನಿಯಮಗಳನ್ನು ಒಪ್ಪಿದ ನಂತ್ರ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು. ನಿಮ್ಮ ಹೊಸ ಎಟಿಎಂ ಕಾರ್ಡ್ ನೊಂದಾಯಿತ ವಿಳಾಸಕ್ಕೆ 7-8 ದಿನಗಳಲ್ಲಿ ಬರುತ್ತದೆ.