ಮಕ್ಕಳಿರುವ ಮನೆಯಲ್ಲಿ ಶೌಚಾಲಯ ಸ್ವಚ್ಚ ಮಾಡುವ ಕಷ್ಟ ಪೋಷಕರಿಗೆ ಮಾತ್ರ ಗೊತ್ತು. ಟಾಯ್ಲೆಟ್ನ್ನ ಕೊಳಕು ಮಾಡಿದ್ರೂ ಸಹ ಮಕ್ಕಳು ತಾವು ಮಾಡಿದ ತಪ್ಪನ್ನ ಒಪ್ಪಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ಯಾರು ಟಾಯ್ಲೆಟ್ ಸೀಟ್ನ್ನ ಕೊಳಕು ಮಾಡ್ತಾರೆ ಅಂತಾ ಕಂಡುಹಿಡಿಯೋಕೆ ಹೊಸ ಐಡಿಯಾ ಮಾಡಿದ್ದು ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ಯಾಥಿ ಎಂಬ ಹೆಸರಿನ ಮಹಿಳೆ ಟಾಯ್ಲೆಟ್ ಸೀಟ್ನ ಕೆಳಗೆ 20 ಪೌಂಡ್( 1930 ರೂ.)ಗಳನ್ನ ಗಮ್ ಟೇಪ್ ಹಾಕಿ ಅಂಟಿಸಿದ್ದಾರೆ. ಬಳಿಕ ಈ ಹಣವನ್ನ ಯಾರು ಮೊದಲು ನೋಡುತ್ತಾರೆ ಅನ್ನೋದನ್ನ ಗಮನಿಸಿದ್ದಾರೆ. ಈ ವಿಡಿಯೋ ಟಿಕ್ಟಾಕ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕ್ಯಾಥಿ ಪ್ಲಾನ್ ಗೆ ಭೇಷ್ ಎಂದಿದ್ದಾರೆ. ಬಳಿಕ ಈ ವಿಡಿಯೋ ಯೂ ಟ್ಯೂಬ್ನಲ್ಲೂ ಹರಿದಾಡಿದೆ.
https://www.youtube.com/watch?v=UStyAUtNN2U&feature=emb_logo