ಹಲವು ಬಾರಿ ಟ್ರಾಫಿಕ್ ಉಲ್ಲಂಘನೆ ಮಾಡಿದ ಬೈಕ್ ಸವಾರನಿಗೆ ಸಂಚಾರಿ ಠಾಣೆ ಪೊಲೀಸರು ಬರೋಬ್ಬರಿ 2 ಮೀಟರ್ ಉದ್ದದ ಚಲನ್ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನೇಕ ಬಾರಿ ಸಂಚಾರಿ ಉಲ್ಲಂಘನೆ ಮಾಡಿದ ಈ ಮಹಾಶಯನಿಗೆ 42,500 ರೂಪಾಯಿ ದಂಡ ವಿಧಿಸಲಾಗಿದೆ.
ಮಡಿವಾಳ ನಿವಾಸಿಯಾಗಿದ್ದ ಅರುಣ್ ಕುಮಾರ್ ಎಂಬವರ ಮೇಲೆ ಬರೋಬ್ಬರಿ 77 ಸಂಚಾರಿ ನಿಯಮ ಉಲ್ಲಂಘನೆ ಕೇಸ್ಗಳು ದಾಖಲಾಗಿದ್ದವು. ರಸ್ತೆಯಲ್ಲಿ ನಿಂತಿದ್ದ ಪೊಲೀಸರು ಅಕಸ್ಮಾತ್ತಾಗಿ ಅರುಣ್ ಕುಮಾರ್ನನ್ನ ಹಿಡಿದಿದ್ದಾರೆ. ಟ್ರಾಫಿಕ್ ಉಲ್ಲಂಘನೆ ಚಲನ್ ನೀಡಲು ಹೋದ ಪೊಲೀಸರು ಈ 2 ಮೀಟರ್ ಉದ್ದದ ಲಿಸ್ಟ್ ಕಂಡು ಶಾಕ್ ಆಗಿದ್ದಾರೆ.
20,000 ರೂಪಾಯಿ ನೀಡಿ ಅರುಣ್ ಕುಮಾರ್ ಇದನ್ನು ಸೆಕೆಂಡ್ ಹ್ಯಾಂಡ್ಗೆ ಖರೀದಿ ಮಾಡಿದ್ದರು ಎನ್ನಲಾಗಿದ್ದು ವಾಹನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.