ಸೆನೆಗಲ್ ಕರಾವಳಿಯಲ್ಲಿ ಈ ವರ್ಷದ ಭೀಕರ ಹಡಗು ದುರಂತ ಸಂಭವಿಸಿದೆ. 140 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆ ಮಾಹಿತಿ ನೀಡಿದೆ.
ಸ್ಥಳೀಯ ಕಾಲಮಾನ(ಶನಿವಾರ) ಸೆನೆಗಲ್ ರಾಜಧಾನಿ ಡಾಕರ್ ನಿಂದ ದಕ್ಷಿಣಕ್ಕೆ 100 ಕಿಲೋಮೀಟರ್ ದೂರದ ಎಂಬೋರ್ ಎಂಬ ಮೀನುಗಾರಿಕೆ ಪಟ್ಟಣದಿಂದ ಹೊರಟ ಕೆಲವೇ ಗಂಟೆಗಳ ನಂತರ ಹಡಗು ಮುಳುಗಡೆಯಾಗಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಸ್ಥೆ ತಿಳಿಸಿದೆ.
ಹಡಗಿನಲ್ಲಿ 200 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಕನಿಷ್ಠ 140ಕ್ಕೂ ಅಧಿಕ ಮಂದಿ ಮುಳುಗಿದ್ದಾರೆ. ಸ್ಥಳೀಯ ಮೀನುಗಾರರು ತಕ್ಷಣವೇ ದೋಣಿಗಳ ಮೂಲಕ ಅನೇಕ ಜನರನ್ನು ರಕ್ಷಿಸಿದ್ದಾರೆ. ಸೆನೆಗಲ್ ಮತ್ತು ಸ್ಪ್ಯಾನಿಶ್ ನೌಕಾಪಡೆಗಳು ಮತ್ತು ಸ್ಥಳೀಯ ಮೀನುಗಾರರು ಕಾರ್ಯಾಚರಣೆ ನಡೆಸಿ ಅನೇಕ ಜನರನ್ನು ರಕ್ಷಿಸಿದ್ದಾರೆ. ವಲಸಿಗರು ದೋಣಿಯಲ್ಲಿ ಸಾಗುತ್ತಿದ್ದರು. ಅಪಾಯಕಾರಿ ಸಮುದ್ರ ಮಾರ್ಗದ ಮೂಲಕ ವಲಸೆ ಹೋಗುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.