ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಶೋ ಈಗಾಗಲೇ ಹಲವಾರು ವಿಚಾರಗಳ ಮೂಲಕ ಸುದ್ದಿಯಲ್ಲಿದೆ. ಈ ಆವೃತ್ತಿಯಲ್ಲಿ ಈವರೆಗೆ ಯಾವ ಸ್ಪರ್ಧಿ ಕೂಡ 1 ಕೋಟಿ ರೂಪಾಯಿ ಪ್ರಶ್ನೆ ಹಂತದವರೆಗೆ ಹೋಗಲು ಆಗಲಿಲ್ಲ ಎಂದು ಅಂದುಕೊಳ್ತಿರುವಾಗಲೇ ಘಾಜಿಯಾಬಾದ್ನ ಸ್ಪರ್ಧಿ 1 ಕೋಟಿಯ ಪ್ರಶ್ನೆಯನ್ನ ಎದುರಿಸಿದ್ದಾರೆ.
ಇಂಗ್ಲೀಷ್ ಶಿಕ್ಷಕಿಯಾಗಿರುವ ಚಾನ್ವಿ ಕುಮಾರ್ಗೆ ಬಿಗ್ ಬಿ ಈ ಸೀಸನ್ನ ಮೊದಲ 1 ಕೋಟಿ ಮೌಲ್ಯದ ಪ್ರಶ್ನೆಯನ್ನ ಕೇಳಿದ್ದಾರೆ. ಆದರೆ ಈ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗದ ಕಾರಣ ಚಾನ್ವಿ ಆಟವನ್ನ ಕ್ವಿಟ್ ಮಾಡಿದ್ದಾರೆ.
ಅಂದಹಾಗೆ 1 ಕೋಟಿ ರೂಪಾಯಿ ಮೌಲ್ಯಕ್ಕೆ ಅಮಿತಾಬ್ ಬಚ್ಚನ್, 2024ರಲ್ಲಿ ಚಂದ್ರನ ಅಂಗಳಕ್ಕೆ ಕಾಲಿಡಲಿರುವ ನಾಸಾ ತನ್ನ ಈ ಕಾರ್ಯಕ್ರಮಕ್ಕೆ ಯಾವ ಗ್ರೀಕ್ ದೇವತೆಯ ಹೆಸರನ್ನ ಇಡಲು ನಿರ್ಧರಿಸಲಾಗಿದೆ ಅಂತಾ ಕೇಳಿದ್ದಾರೆ. ಈ ಪ್ರಶ್ನೆಗೆ ಆಯ್ಕೆಯಾಗಿ ರಿಯಾ, ನೆಮೆಸಿಸ್, ಆಫ್ರೋಡೈಟ್ ಹಾಗೂ ಆರ್ಟೇಮಿಸ್ ನೀಡಲಾಗಿತ್ತು. ಆದರೆ ರಿಯಾ ಹಾಗೂ ಆರ್ಟೆಮಿಸ್ ನಡುವೆ ಗೊಂದಲ ಏರ್ಪಟ್ಟ ಕಾರಣ ಚಾನ್ವಿ ಆಟವನ್ನ ಕ್ವಿಟ್ ಮಾಡಿದ್ದಾರೆ. ಆದರೆ ಈ ಪ್ರಶ್ನೆಗೆ ಸರಿಯಾದ ಉತ್ತರ ಆರ್ಟೆಮಿಸ್ ಆಗಿತ್ತು. ಸರಿಯಾದ ಸಮಯಕ್ಕೆ ಆಟವನ್ನ ಕ್ವಿಟ್ ಮಾಡುವ ಮೂಲಕ ಚಾನ್ವಿ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ.