ಶಾಪಿಂಗ್ ಅಂದ್ರೆ ಯಾರಿಗ್ ತಾನೆ ಇಷ್ಟವಿಲ್ಲ ಹೇಳಿ. ಅದರಲ್ಲೂ ತಿಂಡಿ ಖರೀದಿ ಮಾಡೋದು ಅಂದ್ರಂತೂ ಮಕ್ಕಳು ಮುಂದೆ ನಿಲ್ತಾರೆ. ಆದರೆ ನಿಮಗೆ 5 ಸೆಕೆಂಡ್ನಲ್ಲಿ ಶಾಪಿಂಗ್ ಮಾಡಿ ಮುಗಿಸು ಅಂದ್ರೆ ನಿಮ್ಮ ದೃಷ್ಟಿ ಮೊದಲು ಯಾವ ವಸ್ತು ಮೇಲೆ ಹೋಗಬಹುದು..? ಇದೇ ಪರಿಸ್ಥಿತಿಯಲ್ಲಿದ್ದ ಬಾಲಕನೊಬ್ಬ ಈ ಅವಧಿಯಲ್ಲಿ ಆರಿಸಿಕೊಂಡ ವಸ್ತುಗಳನ್ನ ನೋಡಿದ್ರೆ ನೀವು ದಂಗಾಗಿ ಹೋಗ್ತಿರಾ.
ಒಂದು ಶಾಪಿಂಗ್ ಸ್ಟೋರ್ನಲ್ಲಿ ಬಾಲಕನಿಗೆ 5 ಸೆಕೆಂಡ್ಗಳ ಕಾಲ ಫ್ರೀ ಶಾಪಿಂಗ್ ಮಾಡೋಕೆ ಅವಕಾಶ ನೀಡಲಾಗಿದೆ. ಆತ ಮೊದಲು ಬಾಳೆಹಣ್ಣು, ಕುರುಕಲು ತಿಂಡಿಯನ್ನ ಎತ್ತಿಕೊಂಡಿದ್ದಾನೆ. ಇನ್ನೇನು ಸಮಾಯಾವಕಾಶ ಮುಗೀತು ಅನ್ನೋವಷ್ಟರಲ್ಲಿ ಆತನ ಕಣ್ಣು ಐಫೋನ್ನ ದುಬಾರಿ ಏರ್ಪಾಡ್ ಮೇಲೆ ಬಿದ್ದಿದೆ. ಕೂಡಲೇ ಆತ ಅದನ್ನ ಆರಿಸಿಕೊಂಡಿದ್ದಾನೆ. ಬಾಲಕನ ಈ ಚಾಣಾಕ್ಷ ಬುದ್ಧಿ ನೆಟ್ಟಿಗರನ್ನ ಮಂತ್ರಮುಗ್ದರನ್ನಾಗಿಸಿದೆ.
https://www.instagram.com/p/CG71wPbDv0E/?utm_source=ig_web_copy_link