alex Certify ಮನಕಲಕುತ್ತೆ ಸಾಯುವ ಮುನ್ನ ಮಹಿಳೆಯಾಡಿದ ಕೊನೆ ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ಸಾಯುವ ಮುನ್ನ ಮಹಿಳೆಯಾಡಿದ ಕೊನೆ ಮಾತು

ಫ್ರಾನ್ಸ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತರಾದ ನಾಗರಿಕರ ವಿಚಾರವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುಲ್​ ಮಾಕ್ರೋನ್​ ಸಂತಾಪ ಸೂಚಿಸಿದ್ದಾರೆ. ಇಸ್ಲಾಮಿಸ್ಟ್​ ಭಯೋತ್ಪಾದಕರು ಈ ತಿಂಗಳಲ್ಲಿ ಎರಡನೇ ಬಾರಿಗೆ ದಾಳಿ ನಡೆಸಿದ್ದಾರೆ ಅಂತಾ ಹೇಳಲಾಗ್ತಾ ಇದೆ.

ಚರ್ಚ್​ನಲ್ಲಿದ್ದ ಮೂವರನ್ನ ಚಾಕುವಿನಿಂದ ಇರಿದು ಸಾಯಿಸಲಾಗಿದ್ದು ಇಡೀ ವಿಶ್ವವೇ ಈ ಘಟನೆಗೆ ಮರುಗಿದೆ. ದಾಳಿಯಲ್ಲಿ 60 ವರ್ಷದ ವೃದ್ಧೆ, 55 ವರ್ಷದ ಚರ್ಚ್​ ಸಿಬ್ಬಂದಿ ಹಾಗೂ ಚರ್ಚ್​ ಸಮೀಪದಲ್ಲಿನ ರೆಸ್ಟಾರೆಂಟ್​​ನಲ್ಲಿದ್ದ 44 ವರ್ಷದ ಬ್ರೆಜಿಲ್​ ಮೂಲದ ಮಹಿಳೆಯನ್ನ ಸಾಕಷ್ಟು ಬಾರಿ ಚಾಕುವಿನಿಂದ ಇರಿದು ಕೊಲೆಗೈಯಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಈ 44 ವರ್ಷದ ಬ್ರೆಜಿಲ್​ ಮಹಿಳೆ ಕೊನೆಯುಸಿರು ಎಳೆಯುವ ಮುನ್ನ ನನ್ನ ಮಕ್ಕಳನ್ನ ನಾನು ಪ್ರೀತಿಸುತ್ತೇನೆ ಎಂದು ಹೇಳಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನ ಫ್ರಾನ್ಸ್​​ನ ಟಿವಿ ಚಾನೆಲ್​ಗಳು ವರದಿ ಮಾಡಿವೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...