ನವದೆಹಲಿ: ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಾಲದ ಕಂತುಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇಎಂಐ ಪಾವತಿಸಿದವರಿಗೆ ಕ್ಯಾಶ್ ಬ್ಯಾಕ್ ನೀಡಲಾಗುತ್ತಿದೆ.
ಆದರೆ ಬೆಳೆಸಾಲ, ಟ್ರ್ಯಾಕ್ಟರ್ ಸಾಲಕ್ಕೆ ಚಕ್ರ ಬಡ್ಡಿ ಮನ್ನಾ ಮಾಡುವುದಿಲ್ಲವೆಂದು ಹೇಳಲಾಗಿದೆ. ಮೊರಾಟೋರಿಯಂ ಅವಧಿಯಲ್ಲಿ ಸಾಲದ ತಂತುಗಳ ಮೇಲಿನ ಚಕ್ರ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಈ ಚಕ್ರ ಬಡ್ಡಿ ಮನ್ನಾ ಸೌಲಭ್ಯ ಟ್ರ್ಯಾಕ್ಟರ್ ಸಾಲ ಮತ್ತು ಬೆಳೆ ಸಾಲಕ್ಕೆ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಮಂತ್ರಾಲಯದಿಂದ ಮಾಹಿತಿ ನೀಡಲಾಗಿದೆ.
ಫೆಬ್ರವರಿ 29 ರ ವರೆಗಿನ ಕ್ರೆಡಿಟ್ ಕಾರ್ಡ್ ಬಾಕಿಗಳಿಗೆ ಚಕ್ರಬಡ್ಡಿ ಮನ್ನಾ ಸೌಲಭ್ಯ ಸಿಗಲಿದೆ. ಆದರೆ, ಬೆಳೆ ಮತ್ತು ಟ್ರ್ಯಾಕ್ಟರ್ ಸಾಲಗಳಿಗೆ ಈ ಸೌಲಭ್ಯ ಸಿಗುವುದಿಲ್ಲ. ಈ ಸಾಲಗಳು ಕೃಷಿ ಸಂಬಂಧಿತ ಸಾಲಗಳ ವ್ಯಾಪ್ತಿಗೆ ಬರುತ್ತವೆ. ಮೊರಾಟೋರಿಯಂ ಅವಧಿಯಲ್ಲಿ ಚಕ್ರಬಡ್ಡಿ ಮನ್ನಾ ಯೋಜನೆಗೆ ಶಿಕ್ಷಣ ವಾಹನ, ಗೃಹ, ವೈಯಕ್ತಿಕ,, ಎಂಎಸ್ಎಂಇ ಮೊದಲಾದ ಸಾಲುಗಳು ಬರುತ್ತವೆ. ಆದರೆ, ಕೃಷಿ ಮತ್ತು ಸಂಬಂಧಿತ ಸಾಲಗಳು ಬರುವುದಿಲ್ಲವೆಂದು ಹೇಳಲಾಗಿದೆ.