alex Certify ರಸ್ತೆ ಮೇಲೆ ಅಂಟಿಸಲಾಗಿತ್ತು ಫ್ರಾನ್ಸ್​ ಅಧ್ಯಕ್ಷರ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮೇಲೆ ಅಂಟಿಸಲಾಗಿತ್ತು ಫ್ರಾನ್ಸ್​ ಅಧ್ಯಕ್ಷರ ಫೋಟೋ…!

Emmanuel Macron's Posters Pasted on Roads in Mumbai's Bhendi Bazaar as Protest, Video Goes Viral

ಪ್ರತಿಭಟನೆಯ ರೂಪವಾಗಿ ಮುಂಬೈನ ಭಿಂಡಿ ಬಜಾರ್​ನ ರಸ್ತೆಗಳಲ್ಲಿ ಅಂಟಿಸಲಾಗಿರುವ ಫ್ರಾನ್ಸ್​​ ಅಧ್ಯಕ್ಷ ಇಮ್ಮಾನ್ಯುವಲ್​ ಮ್ಯಾಕ್ರೋನ್​ ಪೋಸ್ಟರ್​ಗಳನ್ನ ತೆರವು ಮಾಡುವಂತೆ ಮುಂಬೈ ಪೊಲೀಸರು ಆದೇಶ ನೀಡಿದ್ದಾರೆ.

ಪಂಥೀಯ ವಿಚಾರವಾಗಿ ಮುಸ್ಲಿಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಫ್ರಾನ್ಸ್​ ಅಧ್ಯಕ್ಷ ಇಮ್ಯಾನುವಲ್​ ವಿರುದ್ಧ ಮುಂಬೈನಲ್ಲೂ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಜೆಜೆ ಫ್ಲೈ ಓವರ್​ ಅಡಿಯ ಮೊಹಮ್ಮದ್​ ಅಲಿ ರಸ್ತೆಯಲ್ಲೂ ಆಕ್ರೋಶ ವ್ಯಕ್ತವಾಗಿತ್ತು.

ಮುಂಬೈ ಪೊಲೀಸ್​ ವಕ್ತಾರ ಎಸ್​. ಚೈತನ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಪೈಡೋನಿ ಠಾಣೆ ಪೊಲೀಸರು ಪೋಸ್ಟರ್​ಗಳನ್ನ ತೆರವು ಮಾಡಿದ್ದಾರೆ ಅಂತಾ ಹೇಳಿದ್ರು. ಫ್ರಾನ್ಸ್ ಅಧ್ಯಕ್ಷರ ಫೋಟೋ ರಸ್ತೆಗಳಲ್ಲಿ ಅಂಟಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ ವಿಡಿಯೋಗಳು ಟ್ವಿಟರ್​ನಲ್ಲಿ ಹರಿದಾಡುತ್ತಿವೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...