ಕೊರೊನಾ ವೈರಸ್ ಭಯದಿಂದಾಗಿ ಜಮೈಕಾದಲ್ಲಿ ಇನ್ನೂ ಶಾಲೆಗಳು ಪುನಾರಂಭಗೊಂಡಿಲ್ಲ. ಹೀಗಾಗಿ ಇಲ್ಲಿನ ಶಿಕ್ಷಕಿ ತನೇಕಾ ಮೆಕಾಯ್ ಎಂಬವರು ಸಾರ್ವಜನಿಕ ಬೀದಿಯಲ್ಲಿನ ಗೋಡೆಗಳನ್ನ ಬಳಸಿ ಮಕ್ಕಳಿಗೆ ಪಾಠ ಹೇಳೋಕೆ ಮುಂದಾಗಿದ್ದಾರೆ.
ಹೀಗೆ ಬೀದಿಯ ಗೋಡೆಗಳಲ್ಲಿ ಈ ಶಿಕ್ಷಕಿ ಪಾಠಗಳನ್ನ ಬರೆದಿಟ್ಟಿದ್ದು ಇದರ ಫೋಟೋ ತೆಗೆದುಕೊಂಡು ಹೋದ ಪೋಷಕರು ಮಕ್ಕಳಿಗೆ ಇದನ್ನ ತೋರಿಸಿ ಪಾಠ ಮಾಡಿಸುತ್ತಿದ್ದಾರೆ.
ತನೇಕಾ ಮೆಕಾಯ್ ಈ ರೀತಿ ಬೀದಿಗಳಲ್ಲಿನ ಗೋಡೆಗಳ ಮೇಲೆ ಕೊರೊನಾ ವೈರಸ್, ಆಧುನಿಕ ವಿದ್ಯಮಾನ, ಸೇರಿದಂತೆ ವಿವಿಧ ಪಾಠಗಳನ್ನ ಬರೆಯುತ್ತಿದ್ದಾರೆ. ಕೊರೊನಾದಿಂದಾಗಿ ಶಿಕ್ಷಣದಿಂದ ವಂಚಿತರಾಗಿರುವ ಬಡಮಕ್ಕಳಿಗಾಗಿ ತನೇಕಾ ಈ ವಿಶೇಷ ಸೇವೆಯನ್ನ ಮಾಡುತ್ತಿದ್ದಾರೆ.