ಲಾಕ್ಡೌನ್ ಸಂದರ್ಭದಲ್ಲಿ ಆರ್ಬಿಐ ಮೊರಟೋರಿಯಂ ಸ್ಕೀಮ್ನ ಲಾಭ ಪಡೆಯದ ಸಾಲಗಾರರ ಕ್ಯಾಶ್ಬ್ಯಾಕ್ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಈ ಅಫಿಡವಿಟ್‌ನಲ್ಲಿ ಬೃಹತ್ ಸಾಲಗಾರರಿಗೆ ಭರ್ಜರಿ ಬಂಪರ್ ದೊರೆತಿದೆ.
ಲಾಕ್ಡೌನ್ ಸಂದರ್ಭದಲ್ಲಿ ಆರ್ಬಿಐ ಇಎಂಐ ವಿನಾಯಿತಿ ನೀಡಿತ್ತು. ಇದೀಗ ಸಾಲ ನೀಡಿದ ಎಲ್ಲ ಬ್ಯಾಂಕ್ಗಳು ಮಾರ್ಚ್ 1, 2020ರಿಂದ ಆಗಸ್ಟ್ 31, 2020ರ ನಡುವಿನ ಅವಧಿಯಲ್ಲಿ ಅರ್ಹ ಸಾಲಗಾರರ ಖಾತೆಯಲ್ಲಿರುವ ಸಂಯುಕ್ತ ಬಡ್ಡಿ ಹಾಗೂ ಸರಳ ಬಡ್ಡಿ ನಡುವಿನ ವ್ಯತ್ಯಾಸದ ಮೊತ್ತವನ್ನ ಕ್ರೆಡಿಟ್ ಮಾಡಲಾಗುವುದು ಅಂತಾ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಅಂತಹ ಅರ್ಹ ಸಾಲಗಾರರು ಸಂಪೂರ್ಣವಾಗಿ ಪ್ರಯೋಜನ ಪಡೆಯದಿದ್ದರೂ ಅಥವಾ ಭಾಗಶಃ ಪ್ರಯೋಜನ ಪಡೆಯದಿದ್ದರೂ ಸಹ ಸಾಲ ನೀಡುವ ಸಂಸ್ಥೆಗಳಿಂದ ಈ ಮೊತ್ತವನ್ನು ನೀಡಲಾಗುವುದು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.