ದಸರಾ ಸಂಭ್ರಮ ಮುಗಿದಿದೆ. ಇನ್ನು ದೀಪಾವಳಿ ಸರದಿ. ನವೆಂಬರ್ ತಿಂಗಳಲ್ಲಿ ದೀಪಾವಳಿ ಸೇರಿದಂತೆ ಗುರುನಾನಕ್ ಜಯಂತಿಯವರೆಗೆ ಅನೇಕ ಹಬ್ಬಗಳಿವೆ.ಇದೇ ಕಾರಣಕ್ಕೆ ಬ್ಯಾಂಕ್ ಒಟ್ಟು 15 ದಿನಗಳ ಕಾಲ ಬಂದ್ ಇರಲಿದೆ. ಎಲ್ಲ ರಾಜ್ಯಗಳಲ್ಲೂ ಈ ರಜೆ ಅನ್ವಯಿಸುವುದಿಲ್ಲ. ಕೆಲ ರಾಜ್ಯಗಳಲ್ಲಿ ಬ್ಯಾಂಕ್ ಮುಚ್ಚಿದ್ದರೆ ಮತ್ತೆ ಕೆಲ ರಾಜ್ಯಗಳಲ್ಲಿ ಬ್ಯಾಂಕ್ ತೆರೆದಿರಬಹುದು. ರಜೆ ನೀಡುವುದು ಆಯಾ ರಾಜ್ಯಕ್ಕೆ ಸಂಬಂಧಿಸಿದ್ದು.
ಆರ್ ಬಿಐ ಪ್ರಕಾರ, ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿ ಒಟ್ಟು 15 ದಿನ ಬ್ಯಾಂಕ್ ರಜೆಯಿರಲಿದೆ. ನವೆಂಬರ್ 1 ಭಾನುವಾರ. ಹಾಗಾಗಿ ಬ್ಯಾಂಕ್ ಮುಚ್ಚಿರುತ್ತದೆ. ನವೆಂಬರ್ 6ರಂದು ಬಾಂಗ್ಲಾ ಮಹೋತ್ಸವ. ಅಲ್ಲಿನ ಬ್ಯಾಂಕ್ ಗಳಿಗೆ ಮಾತ್ರ ರಜೆಯಿರುತ್ತದೆ. ನವೆಂಬರ್ 8 ಮತ್ತೆ ಭಾನುವಾರ. ನವೆಂಬರ್ 14ರಂದು ದೀಪಾವಳಿ ಅಮವಾಸ್ಯೆ. ನವೆಂಬರ್ 15ರಂದು ಭಾನುವಾರ. ನವೆಂಬರ್ 16ರಂದು ಭಾಯ್ ದೂಜ್. ನವೆಂಬರ್ 17ರಂದು ನಿಂಗೋಲ್ ಚಕ್ಕೋಬಾ ಸ್ಥಳೀಯ ರಜೆ. ನವೆಂಬರ್ 20ರಂದು ಛಟ್ ಪೂಜೆ. ನವೆಂಬರ್ 21ರಂದೂ ಛಟ್ ಪೂಜೆ ಸಂಬಂಧ ಸ್ಥಳೀಯ ರಜೆ. ನವೆಂಬರ್ 22ರಂದು ಭಾನುವಾರ. ನವೆಂಬರ್ 28ರಂದು ಶನಿವಾರ ರಜೆ. ನವೆಂಬರ್ 29ರಂದು ಭಾನುವಾರ. ನವೆಂಬರ್ 30ರಂದು ಗುರುನಾನಕ್ ಜಯಂತಿ.
ಆಯಾ ರಾಜ್ಯಗಳು ಹಬ್ಬಕ್ಕೆ ಅನುಗುಣವಾಗಿ ಬ್ಯಾಂಕ್ ಗಳಿಗೆ ರಜೆ ನೀಡುತ್ತವೆ. ರಜೆಯ ದಿನಗಳಲ್ಲಿ ಮೊಬೈಲ್ ಬ್ಯಾಂಕಿಂಗ್, ನೆಟ್‌ಬ್ಯಾಂಕಿಂಗ್, ಯುಪಿಐ ಮತ್ತು ಎಟಿಎಂಗಳ ಮೂಲಕ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಬಹುದು.