ಕೊರೊನಾ ವೈರಸ್ ನಂತ್ರ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜನರು ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗ್ತಿಲ್ಲ. ಇದೇ ಕಾರಣಕ್ಕೆ ಜನರು ಇಂಟರ್ನೆಟ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದಕ್ಕಾಗಿ ಹೆಚ್ಚಿನ ಡೇಟಾ ಬಳಕೆಯಾಗ್ತಿದೆ. ಆದ್ರೆ ಎರಡು ದಿನದ ಡೇಟಾ ಒಂದೇ ದಿನ ಖಾಲಿಯಾಗ್ತಿದ್ದು, ಹೇಗಪ್ಪ ಡೇಟಾ ಉಳಿಸೋದು ಎಂಬ ಚಿಂತೆಯೂ ಜನರನ್ನು ಕಾಡ್ತಿದೆ.
ನೀವು ಯಾವುದೇ ಮಾಧ್ಯಮದಲ್ಲಿ ಇಂಟರ್ನೆಟ್ ಬಳಕೆ ಮಾಡ್ತಿದ್ದರೂ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಫೀಸ್ ನಲ್ಲಿ ಬಳಕೆ ಮಾಡುವಂತೆ ಮನೆಯಲ್ಲಿ ಇಂಟರ್ನೆಟ್ ಬಳಸಬೇಡಿ. ಅವಶ್ಯಕತೆಯಿದ್ದಾಗ ಮಾತ್ರ ಇಂಟರ್ನೆಟ್ ಓಪನ್ ಮಾಡಿ. ಒಂದೇ ಬಾರಿ ಲ್ಯಾಪ್ ಟಾಪ್ ನಲ್ಲಿ ಅನೇಕ ವಿಂಡೋ ತೆರೆದಿಡಬೇಡಿ. ವಿಡಿಯೋ ಸ್ಟ್ರೀಮಿಂಗ್ ವೆಬ್ಸೈಟ್ ನಿಂದ ದೂರವಿರಿ.
ವಾಟ್ಸಾಪ್, ಫೇಸ್ಬುಕ್, ಮೆಸ್ಸೆಂಜರ್ ಅಪ್ಲಿಕೇಷನ್ ಗಳಲ್ಲಿ ಫೋಟೋ, ವಿಡಿಯೋ ಅಟೋಮೆಟಿಕ್ ಡೌನ್ಲೋಡ್ ತಪ್ಪಿಸಿ. ಆನ್ಲೈನ್ ವಿಡಿಯೋವನ್ನು ಹೆಚ್ಚಾಗಿ ನೋಡಬೇಡಿ. ಆನ್ಲೈನ್ ಗೇಮ್ ಕಡಿಮೆ ಮಾಡಿ. ಮೊಬೈಲ್ ನಲ್ಲಿ ಆಗುವ ಕೆಲಸವನ್ನು ಡೆಸ್ಕ್ ಟಾಪ್ ನಲ್ಲಿ ಮಾಡಬೇಡಿ. ವಿಡಿಯೋ ಗಾತ್ರವನ್ನು ಕಡಿಮೆ ಮಾಡಿ ನಂತ್ರ ಡೌನ್ಲೋಡ್ ಮಾಡಿ. ಹಾಗೆ ಮನೆಯವರ ಜೊತೆ ಸೇರಿ ನೋಡಿ. ಸಾಮಾಜಿಕ ಜಾಲತಾಣದಲ್ಲಿ ಅವಶ್ಯಕವಲ್ಲದ ವಿಡಿಯೋ ನೋಡಬೇಡಿ. ವಿಡಿಯೋ ಅಪ್ಲೋಡ್ ತಪ್ಪಿಸಿ.