ಸಮಾಜ ಎಷ್ಟೇ ಬದಲಾದ್ರೂ ಮಹಿಳೆಯರ ಪರಿಸ್ಥಿತಿ ಮಾತ್ರ ಬದಲಾದಂತೆ ಕಾಣ್ತಿಲ್ಲ. ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇದೆ. ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಾಗ್ತಲೇ ಇದೆ. ನೈಜೀರಿಯಾದಲ್ಲಿ ಇದು ಮಿತಿಮೀರಿದೆ.
ನೈಜೀರಿಯಾದಲ್ಲಿ 13ರಿಂದ 18 ವರ್ಷದ ಹುಡುಗಿಯರೇ ಟಾರ್ಗೆಟ್. ಅವರನ್ನು ಮೃಗಗಳಂತೆ ನೋಡಿಕೊಳ್ಳಲಾಗುತ್ತದೆ. ಬಡ ಕುಟುಂಬದ ಹೆಣ್ಣು ಮಕ್ಕಳನ್ನು ಮಕ್ಕಳಾಗದ ಶ್ರೀಮಂತರು ಖರೀದಿ ಮಾಡ್ತಾರೆ. ಸಣ್ಣ ವಯಸ್ಸಿನಲ್ಲಿಯೇ ಅವರಿಂದ ಮಗು ಪಡೆಯುತ್ತಾರೆ. ಹೆರಿಗೆ ನಂತ್ರ ಬಾಲಕಿಯರಿಗೆ ವಿಶ್ರಾಂತಿ ಇರುವುದಿಲ್ಲ. ಒಂದಾದ ಮೇಲೆ ಒಂದು ಮಕ್ಕಳನ್ನು ಹೆರುವುದು ಅವ್ರ ಕೆಲಸವಾಗಿರುತ್ತದೆ.
ಇದು ಕಾನೂನು ವಿರೋಧಿ. ಆದ್ರೆ ಹಣವಂತರು ಇದನ್ನು ಬಿಟ್ಟಿಲ್ಲ. ಮಕ್ಕಳು ಆರೋಗ್ಯವಾಗಿರಲಿ ಎನ್ನುವ ಕಾರಣಕ್ಕೆ ಗರ್ಭಿಣಿಯರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಾರೆ. ಬೇಕಾದಷ್ಟು ಖರ್ಚು ಮಾಡ್ತಾರೆ. ಗರ್ಭಪಾತ ನೈಜೀರಿಯಾದಲ್ಲಿ ಕಾನೂನು ಬಾಹಿರ. ಹಾಗಾಗಿ ಬಾಲಕಿಯರು ಗರ್ಭ ಧರಿಸಿದ್ರೂ ಗರ್ಭಪಾತ ಮಾಡಲಾಗುವುದಿಲ್ಲ. ಇದು ಶ್ರೀಮಂತರಿಗೆ ಪ್ಲಸ್ ಪಾಯಿಂಟ್ ಆಗಿದೆ.