alex Certify ಅಚ್ಚರಿಗೊಳಿಸುತ್ತೆ ಈ ಪುಟ್ಟ ಪೋರಿಯ ಸಿಂಗಿಂಗ್​ ಟ್ಯಾಲೆಂಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಈ ಪುಟ್ಟ ಪೋರಿಯ ಸಿಂಗಿಂಗ್​ ಟ್ಯಾಲೆಂಟ್​

ಖ್ಯಾತ ಸಂಗೀತ ನಿರ್ದೇಶಕ ಎ. ಆರ್​. ರೆಹಮಾನ್​ರ ಪ್ರಸಿದ್ಧ ಹಾಡುಗಳಲ್ಲಿ ಒಂದಾದ ಮಾ ತುಜೆ ಸಲಾಂ ಹಾಡನ್ನ 4 ವರ್ಷದ ಪೋರಿಯೊಬ್ಬಳು ಹಾಡುವ ಮೂಲಕ ನೆಟ್ಟಿಗರ ಹೃದಯ ಕದ್ದಿದ್ದಾಳೆ.

ಮಿಜೋರಾಂನ ಲುಂಗ್ಲೆ ಜಿಲ್ಲೆಯ ನಾಲ್ಕು ವರ್ಷದ ಪ್ರಿಸ್ಕೂಲ್​ ಎಸ್ತರ್​ ಹಮ್ಟೆ ಎಂಬ 4 ವರ್ಷದ ಬಾಲಕಿ ಈ ಹಾಡನ್ನ ಹಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ರಾಷ್ಟ್ರ ಧ್ವಜವನ್ನ ಕೈಯಲ್ಲಿ ಹಿಡಿದುಕೊಂಡು ಮುದ್ದು ಮುದ್ಧಾಗಿ ಹಾಡ್ತಿರುವ ಬಾಲಕಿಗೆ ಪ್ರತಿಭೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಅಂದಹಾಗೆ ಈ ಪುಟಾಣಿಗೆ ತನ್ನ ಮಾತೃಭಾಷೆ ಮಿಜೋ ಬಿಟ್ಟರೆ ಇನ್ಯಾವ ಭಾಷೆಯನ್ನೂ ಮಾತನಾಡಲು ಬರಲ್ಲ. ಆದರೆ ಹಾಡಿನ ವಿಚಾರಕ್ಕೆ ಬಂದರೆ ಆಕೆ ಇಂಗ್ಲಿಷ್​ ಹಾಗೂ ಹಿಂದಿ ಭಾಷೆಯ ಹಾಡುಗಳನ್ನ ಸುಲಲಿತವಾಗಿ ಹಾಡಬಲ್ಲಳು.

ಈ ಬಾಲಕಿ ಯೂಟ್ಯೂಬ್​​ನಲ್ಲಿ ತನ್ನದೇ ಆದ ಖಾತೆಯನ್ನ ಹೊಂದಿದ್ದಾಳೆ. ಖಾತೆ ತೆರೆದ ಇನ್ನೂ ವರ್ಷ ಕಳೆದಿಲ್ಲ. ಆಗಲೇ 57000ಕ್ಕೂ ಹೆಚ್ಚು ಚಂದಾದಾರರನ್ನ ಗಳಿಸಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...