ಬಾಲಿವುಡ್ ಗಾಯಕಿ ನೇಹಾ ಕಕ್ಕರ್, ರೋಹನ್ ಪ್ರೀತ್ ಸಿಂಗ್ ಜೊತೆ ಅಕ್ಟೋಬರ್ 24ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಸೋಶಿಯಲ್ ಮೀಡಿಯಾದ ತುಂಬೆಲ್ಲ ನವ ಜೋಡಿಯ ವಿವಾಹದ ಫೋಟೋ ಭಾರೀ ಚರ್ಚೆಗೆ ಕಾರಣವಾಯ್ತು.
ಮೊದ ಮೊದಲು ತಮ್ಮ ಮದುವೆ ಫೋಟೋಗಳಿಗೆ ಒಳ್ಳೋಳ್ಳೆ ಕಮೆಂಟ್ ಪಡೆದಿದ್ದ ನೇಹಾ ಬಳಿಕ ಟ್ರೋಲಿಗರ ಬಾಯಿಗೆ ಆಹಾರವಾಗಿದ್ರು. ನೇಹಾ ತಮ್ಮ ಮದುವೆಯ ಔಟ್ಫಿಟ್ಗಳನ್ನ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್, ಅನುಷ್ಕಾ – ವಿರಾಟ್ ಹಾಗೂ ರಣವೀರ್ ಸಿಂಗ್ - ದೀಪಿಕಾ ಪಡುಕೋಣೆ ಮದುವೆ ನೋಡಿ ಕಾಪಿ ಮಾಡಿದ್ದಾರೆ ಅಂತಾ ನೆಟ್ಟಿಗರು ಆರೋಪಿಸಿದ್ರು. ಇದಾದ ಬಳಿಕ ನೇಹಾ – ರೋಹನ್ ಪ್ರೀತ್ ಜೋಡಿ ಸಖತ್ತಾಗೇ ಟ್ರೋಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ಡ್ರೆಸ್ ಬಗ್ಗೆ ವಿಪರೀತ ಚರ್ಚೆ ಆಗ್ತಿರೋದನ್ನ ನೋಡಿದ ನೇಹಾ ಇದೀಗ ಖುದ್ದು ಈ ಎಲ್ಲಾ ಟ್ರೋಲ್ಗಳಿಗೆ ಉತ್ತರ ನೀಡಿದ್ದಾರೆ. ನನಗೆ ಈ ಡ್ರೆಸ್ಗಳನ್ನ ಖುದ್ದು ಸಭ್ಯಸಾಚಿಯೇ ಉಡುಗೊರೆ ರೂಪದಲ್ಲಿ ನೀಡಿದ್ದಾರೆ ಅಂತಾ ಹೇಳೋ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ತಮ್ಮ ಮದುವೆ ಫೋಟೋಗಳನ್ನ ಪೋಸ್ಟ್ ಮಾಡಿ ಅದಕ್ಕೆ ಕ್ಯಾಪ್ಶನ್ ನೀಡಿರುವ ನೇಹಾ ಕಕ್ಕರ್, ಎಷ್ಟೋ ಜನ ಸಭ್ಯಸಾಚಿಯ ಉಡುಗೆಗಳನ್ನ ತೊಡಬೇಕು ಅಂತಾ ಕನಸು ಕಾಣ್ತಿದ್ದಾರೆ. ಆದರೆ ನನಗೆ ಖುದ್ದು ಸಭ್ಯಸಾಚಿಯೇ ಮದುವೆ ವಸ್ತ್ರಗಳನ್ನ ಉಡುಗೊರೆಯಾಗಿ ನೀಡಿದ್ದಾರೆ ಅಂತಾ ಬರೆದುಕೊಂಡಿದ್ದಾರೆ.