ಲಾವಂಚದ ಬೇರಿನ ಬಗ್ಗೆ ಕೇಳಿದ್ದೀರಾ? ಇದರ ಪ್ರಯೋಜನಗಳೇನು ನಿಮಗೆ ಗೊತ್ತಾ? ಬಿಸಿನೀರಿಗೆ ಹಾಕಿ ಕುದಿಸಿದಾಕ್ಷಣ ನೀರಿಗೆ ತನ್ನ ಘಮವನ್ನು ಹಬ್ಬಿಸುವ ಈ ಬೇರನ್ನು ನಿತ್ಯ ಬಳಸುವುದರಿಂದ ಹಲವು ಪ್ರಯೋಜನಗಳಿವೆ.
ಉಷ್ಣ ಸಮಸ್ಯೆಯಿಂದ ಬಾಯಿ ಹುಣ್ಣಾಗಿದ್ದರೆ, ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಲಾವಂಚ ಬೆರೆಸಿದ ಬಿಸಿನೀರು ಕುಡಿದು ನೋಡಿ. ಎರಡರಿಂದ ಮೂರು ವಾರದೊಳಗೆ ನಿಮ್ಮ ಸಮಸ್ಯೆ ದೂರವಾಗುತ್ತದೆ.
ಊಟವಾದ ಬಳಿಕ ಲಾವಂಚ ಬೆರೆಸಿದ ನೀರನ್ನು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಲಾವಂಚವನ್ನು ನೀರಿನಲ್ಲಿ 7-8 ಗಂಟೆ ನೆನೆಸಿದರೆ ಮಾತ್ರ ನಿಮಗೆ ಇದರ ಸಂಪೂರ್ಣ ಪ್ರಯೋಜನ ದೊರೆಯುತ್ತದೆ. ಲಾವಂಚದ ಬೇರು ಎಲ್ಲಾ ಆಯುರ್ವೇದಿಕ್ ಮಳಿಗೆಗಳಲ್ಲಿ ಲಭ್ಯವಿರುತ್ತದೆ.
ಲಾವಂಚದ ನೀರು ಕುಡಿಯುವುದರಿಂದ ದೇಹವೂ ತಂಪು, ಹೊಟ್ಟೆಯುರಿಯೂ ಕಡಿಮೆಯಾಗುತ್ತದೆ. ರಕ್ತ ಪಿತ್ತಕ್ಕೂ ಇದು ಹೇಳಿ ಮಾಡಿಸಿದ ಮದ್ದು. ಲಾವಂಚದ ಬೇರು ಹಾಕಿದ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದ ದುರ್ಗಂಧ ದೂರವಾಗುತ್ತದೆ.
ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ತಲೆಗೆ ಮಸಾಜ್ ಮಾಡಿಕೊಂಡರೆ ಕಣ್ಣಿನ ಉರಿ, ತಲೆನೋವು ದೂರವಾಗುತ್ತದೆ. ದೇಹ ತಂಪಾಗಿರುತ್ತದೆ.