alex Certify ಈ ಹೆಗ್ಗಳಿಕೆಗೆ ಪಾತ್ರವಾಗಿದೆ ರಾಷ್ಟ್ರ ರಾಜಧಾನಿ ನವದೆಹಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹೆಗ್ಗಳಿಕೆಗೆ ಪಾತ್ರವಾಗಿದೆ ರಾಷ್ಟ್ರ ರಾಜಧಾನಿ ನವದೆಹಲಿ

ದೆಹಲಿ ಸರ್ಕಾರ ಜಾರಿಗೆ ತಂದ ಎಲೆಕ್ಟ್ರಿಕ್​ ವಾಹನ ಪಾಲಿಸಿ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 3000 ಎಲೆಕ್ಟ್ರಿಕ್​ ಕಾರುಗಳು ನೋಂದಣಿಯಾಗಿವೆ. ದೆಹಲಿಯಲ್ಲಿ ಉಂಟಾಗಿರುವ ವಾಯು ಮಾಲಿನ್ಯ ನಿಯಂತ್ರಣ ಮಾಡಲು ಇದು ಮಹತ್ವದ ಹೆಜ್ಜೆಯಾಗಿದೆ.

ಎಲೆಕ್ಟ್ರಿಕ್​ ವಾಹನ ಪಾಲಿಸಿ ಬಳಿಕ 3000 ವಾಹನಗಳನ್ನ ನೋಂದಣಿ ಮಾಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಕೀರ್ತಿಗೆ ದೆಹಲಿ ಪಾತ್ರವಾಗಿದೆ. ಅಲ್ಲದೇ ವಾಯು ಮಾಲಿನ್ಯ ತಡೆಗಾಗಿ ಪೆಟ್ರೋಲ್​, ಡಿಸೇಲ್​ ವಾಹನಗಳನ್ನ ಬದಿಯಿಟ್ಟು ಅತಿ ಹೆಚ್ಚು ಸಂಖ್ಯೆಯಲ್ಲಿ ಎಲೆಕ್ಟ್ರಿಕ್​ ವಾಹನಗಳನ್ನ ರಸ್ತೆಗಿಳಿಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಹೊಸ ಪಾಲಿಸಿ ಅನ್ವಯ ಎಲೆಕ್ಟ್ರಿಕ್​ ವಾಹನಗಳನ್ನ ಖರೀದಿ ಮಾಡುವವರಿಗೆ ದೆಹಲಿ ಸರ್ಕಾರ ವಿಶೇಷ ಸಬ್ಸಿಡಿ ನೀಡುವುದಾಗಿ ಹೇಳಿತ್ತು. ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಸರ್ಕಾರ ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡೋದಾಗಿ ಹೇಳಿತ್ತು. ಅಲ್ಲದೇ ಇ – ವಾಹನಗಳನ್ನ ಉತ್ತೇಜಿಸುವ ಸಲುವಾಗಿ ಪ್ರತಿ 3 ಕಿಲೋಮೀಟರ್​ಗೆ ಒಂದರಂತೆ ಹೊಸ ಚಾರ್ಜಿಂಗ್​ ಕೇಂದ್ರಗಳನ್ನ ದೆಹಲಿಯಲ್ಲಿ ಸ್ಥಾಪನೆ ಮಾಡಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...