alex Certify ಟಾಯ್ಲೆಟ್​ ಬಣ್ಣ ನೋಡಿ ಕೆಂಡಾಮಂಡಲವಾದ ಸಮಾಜವಾದಿ ಪಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಯ್ಲೆಟ್​ ಬಣ್ಣ ನೋಡಿ ಕೆಂಡಾಮಂಡಲವಾದ ಸಮಾಜವಾದಿ ಪಕ್ಷ

ಉತ್ತರ ಪ್ರದೇಶದ ಗೋರಖ್​ಪುರ ರೈಲ್ವೇ ಆಸ್ಪತ್ರೆಯ ಶೌಚಾಲಯಕ್ಕೆ ಕೆಂಪು ಹಾಗೂ ಹಸಿರು ಬಣ್ಣ ಬಳಿದಿದ್ದನ್ನ ಸಮಾಜವಾದಿ ಪಕ್ಷ ಖಂಡಿಸಿದೆ. ಇದು ನಮ್ಮ ಪಕ್ಷದ ಬಾವುಟಕ್ಕೆ ಮಾಡಿದ ಅವಮಾನ ಅಂತಾ ಕಿಡಿಕಾರಿದೆ.

ಗೋರಖ್​ಪುರದಲ್ಲಿರುವ ಪಕ್ಷದ ಕಚೇರಿಗೆ ಜಮಾಯಿಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ ಅಂತಾ ಪಕ್ಷದ ನಾಯಕರ ಬಳಿ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದ ಗೋರಖ್​ಪುರದಲ್ಲಿರುವ ಲಲಿತ್​ ನಾರಾಯಣ್​ ಮಿಶ್ರಾ ರೈಲ್ವೇ ಆಸ್ಪತ್ರೆಯ ಶೌಚಾಲಯದ ಗೋಡೆಗೆ ಕೆಂಪು ಹಾಗೂ ಹಸಿರು ಬಣ್ಣವನ್ನ ಬಳಸಲಾಗಿದೆ. ನಮ್ಮ ಪಕ್ಷದ ಮೇಲಾದ ಈ ಅವಮಾನವನ್ನ ಸಹಿಸಲು ಸಾಧ್ಯವಿಲ್ಲ. ಕೂಡಲೇ ರೈಲ್ವೆ ಇಲಾಖೆ ಈ ತಪ್ಪನ್ನ ಸರಿ ಮಾಡಿಕೊಳ್ಳಬೇಕು. ನಮ್ಮ ಬೇಡಿಕೆ ಈಡೇರಿಸಿದಿದ್ದಲ್ಲಿ ಪ್ರತಿಭಟನೆ ಮಾಡುತ್ತೇವೆ ಅಂತಾ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ರಾಮ್​ ನಾಗಿನ್​ ಸಾಹಿನಿ ಹೇಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...