alex Certify ದೆಹಲಿಯಲ್ಲಿ ಮೂರನೇ ಹಂತಕ್ಕೆ ತಲುಪಿತಾ ಕೊರೊನಾ ಸೋಂಕು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯಲ್ಲಿ ಮೂರನೇ ಹಂತಕ್ಕೆ ತಲುಪಿತಾ ಕೊರೊನಾ ಸೋಂಕು…?

ಸೆಪ್ಟೆಂಬರ್​ ತಿಂಗಳಿನಿಂದ ದೇಶದಲ್ಲಿ ಕೊರೊನಾ ವೈರಸ್​ ಒಂದು ರೀತಿಯಲ್ಲಿ ನಿಯಂತ್ರಣಕ್ಕೆ ಬಂದಿದೆ ಅಂದರೆ ತಪ್ಪಾಗಲಿಕ್ಕಿಲ್ಲ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರ ಕೊರೊನಾ ವೈರಸ್​ ಸೋಂಕು ಮೂರನೇ ಹಂತಕ್ಕೆ ತಲುಪಿದೆಯಾ ಅನ್ನೋ ಅನುಮಾನ ದಟ್ಟವಾಗಿದೆ.

ಈ ವಿಚಾರವಾಗಿ ಮಾತನಾಡಿದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​, ದೆಹಲಿಯಲ್ಲಿ ಕೊರೊನಾ ಮೂರನೇ ಹಂತದಲ್ಲಿ ಇದೇನಾ ಅನ್ನೋ ಪ್ರಶ್ನೆಗೆ ಈಗಲೇ ಉತ್ತರ ಕೊಡಲು ಸಾಧ್ಯವಿಲ್ಲ. ಇನ್ನೊಂದು ವಾರದಲ್ಲಿ ಮೂರನೇ ಹಂತಕ್ಕೆ ತಲುಪಿರೋದ್ರ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಅಂತಾ ಹೇಳುವ ಮೂಲಕ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.

ದೆಹಲಿ ಸರ್ಕಾರ ಸೋಂಕಿತರ ಸಂಪರ್ಕಿತರನ್ನ ಹುಡುಕುವ ಕೆಲಸವನ್ನ ಭರದಿಂದ ಮಾಡುತ್ತಿದೆ. ಇದು ಹಬ್ಬಗಳ ಸಮಯ ಅಲ್ಲದೇ ಚಳಿಗಾಲ ಕೂಡ ಆರಂಭವಾಗಿದೆ. ಅಲ್ಲದೇ ಯಾವ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಡುತ್ತದೆಯೋ ಆ ವ್ಯಕ್ತಿಯ ಸಂಪರ್ಕಿತರಿಗೆ ಎರಡೆರೆಡು ಬಾರಿ ಟೆಸ್ಟ್ ಮಾಡುತ್ತಿದ್ದೇವೆ. ನಮ್ಮ ಉದ್ದೇಶ ಕೊರೊನಾವನ್ನ ಸಂಪೂರ್ಣವಾಗಿ ರಾಜ್ಯದಿಂದ ಕಿತ್ತೊಗೆಯೋದು. ಹೀಗಾಗಿ ನಮಗೆ ದೆಹಲಿಯಲ್ಲಿ ಜಾಸ್ತಿ ಸೋಂಕಿತರು ಇದ್ದಾರೆ ಅಂತಾ ಎನಿಸುತ್ತಿದೆ ಅಂತಾ ಸಬೂಬು ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...