ಕಡಿಮೆ ಬಂಡವಾಳದಲ್ಲಿ ಹೆಚ್ಚು ಗಳಿಸಲು ಎಲ್ಲರೂ ಇಷ್ಟಪಡ್ತಾರೆ. ಅಂತ ಬ್ಯುಸಿನೆಸ್ ಗೆ ಈಗ ಬೇಡಿಕೆ ಹೆಚ್ಚಾಗಿದೆ. ಸ್ವಾವಲಂಬಿ ಭಾರತದ ಹೆಸರಿನಲ್ಲಿ ಸ್ವಂತ ಉದ್ಯೋಗ ಶುರು ಮಾಡುವವರಿಗೆ ಮೋದಿ ಸರ್ಕಾರ ಕೂಡ ಪ್ರೋತ್ಸಾಹ ನೀಡ್ತಿದೆ. ನೀವು ವ್ಯವಹಾರ ಶುರು ಮಾಡಲು ಬಯಸಿದ್ದರೆ ಅಣಬೆ ಕೃಷಿ ಶುರು ಮಾಡಿ ಕೈ ತುಂಬ ಹಣ ಸಂಪಾದನೆ ಮಾಡಬಹುದು.
ಅಣಬೆ ಕೃಷಿಯನ್ನು ಕೇವಲ 5 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಪ್ರಾರಂಭಿಸಬಹುದು. ಇದಕ್ಕಾಗಿ ಹೆಚ್ಚಿನ ಸಂಪನ್ಮೂಲಗಳ ಅಗತ್ಯವಿರುವುದಿಲ್ಲ. ಆರಂಭದಲ್ಲಿ ಇದಕ್ಕಾಗಿ ಹೆಚ್ಚಿನ ಹಣ ಅಥವಾ ಸ್ಥಳದ ಅಗತ್ಯವಿರುವುದಿಲ್ಲ. ಕೇವಲ ಒಂದು ಸಣ್ಣ ಕೊಠಡಿಯಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಕೇವಲ 5 ರಿಂದ 6 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕು. ಅಣಬೆ ಕೃಷಿಯನ್ನು 30 ರಿಂದ 40 ಗಜಗಳಷ್ಟು ಜಾಗದಲ್ಲಿ ಮಾಡಬಹುದು.
ಅಣಬೆಯನ್ನು ಆನ್ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ಮಾರಾಟ ಮಾಡಬಹುದು. ಒಂದು ಕಿಲೋಗ್ರಾಂ ಅಣಬೆ ಪ್ಯಾಕೆಟ್ ಬೆಲೆ 100ರಿಂದ 150 ರೂಪಾಯಿ ಒಳಗಿದೆ. ಸಣ್ಣ ಮಟ್ಟದಲ್ಲಿ ಶುರು ಮಾಡಿ ನಂತ್ರ ವ್ಯವಹಾರ ವಿಸ್ತರಿಸಬಹುದು. ಸದಾ ಬೇಡಿಕೆಯಲ್ಲಿರುವ ಅಣಬೆ ಕೃಷಿಯಿಂದ ಕೈತುಂಬ ಲಾಭ ಗಳಿಸಬಹುದು. ಅಣಬೆ ಕೃಷಿ ಬಗ್ಗೆ ತರಬೇತಿ ಕೂಡ ನೀಡಲಾಗುತ್ತದೆ. ಸೂಕ್ತ ತರಬೇತಿ ಪಡೆದು ವ್ಯವಹಾರಕ್ಕೆ ಇಳಿಯುವುದು ಉತ್ತಮ.