ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿದ್ದವು. ಗುರುವಾರ ಕೇಶುಭಾಯ್ ಪಟೇಲ್ ನಿಧನರಾಗಿದ್ದಾರೆ.
2014 ರಲ್ಲಿ, 92 ವರ್ಷದ ಪಟೇಲ್ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಕಳೆದ ತಿಂಗಳು ಕೇಶುಭಾಯ್ ಗೆ ಕೊರೊನಾ ಕಾಣಿಸಿಕೊಂಡಿತ್ತು. ಇತ್ತೀಚೆಗೆ ಸೋಮನಾಥ ದೇವಾಲಯ ಟ್ರಸ್ಟ್ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಕೇಶುಭಾಯ್ ಎರಡು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಕೇಶುಭಾಯ್ ಪಟೇಲ್ ಅವರನ್ನು ಪ್ರಧಾನಿ ಮೋದಿ ಗುರುವೆಂದು ಪರಿಗಣಿಸಿದ್ದರು. 1960 ರಲ್ಲಿ ಜನ ಸಂಘದಿಂದ ತಮ್ಮ ರಾಜಕೀಯ ಜೀವನವನ್ನು ಕೇಶುಭಾಯ್ ಪ್ರಾರಂಭಿಸಿದ್ದರು. 1978 ರಿಂದ 1980 ರವರೆಗೆ ಪಟೇಲ್, ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1978 ಮತ್ತು 1995 ರ ನಡುವೆ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಪಟೇಲ್ 1980 ರಲ್ಲಿ ಬಿಜೆಪಿಯ ಸಂಘಟಕರಾದರು. 1995 ರಲ್ಲಿ ಗುಜರಾತ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇಶುಭಾಯ್ ನಾಯಕತ್ವದಲ್ಲಿ ಜಯಗಳಿಸಿತು.