ಹುಟ್ಟಿನಿಂದಲೇ ದೃಷ್ಟಿ ದೋಷ ಕಳೆದುಕೊಂದು ದಿವ್ಯಾಂಗಿಯಾಗಿರುವ ಹಿಮಾಚಲ ಪ್ರದೇಶದ 24 ವರ್ಷದ ಮನೋಜ್ ಕುಮಾರ್ ಜೀವನದಲ್ಲಿ ನಿರಾಶಾವಾದಿಯಾಗದೇ ಹೋರಾಟ ಜೀವನ ನಡೆಸುತ್ತಾ ಎಲ್ಲರಿಗೂ ಆದರ್ಶವಾಗಿದ್ದಾರೆ.
ಕೊರೋನಾ ವೈರಸ್ ಸಾಂಕ್ರಮಿಕದ ಕಾರಣ ಜೀವನ ನಡೆಸಲು ಪಾಡು ಪಡುತ್ತಿರುವ ತಮ್ಮ ತಂದೆಯ ನೆರವಿಗೆ ನಿಂತಿರುವ ಮನೋಜ್ ಕುಮಾರ್ ಕ್ಯಾಂಡಲ್ ಮಾಡುವ ಕಲೆ ಕರಗತ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಕಾಂಗ್ರಾ ಜಿಲ್ಲೆಯ ಮಜೆರ್ನಾ ಗ್ರಾಮದ ಮನೋಜ್ ಚಂಡೀಗಡಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೋವಿಡ್-19 ಲಾಕ್‌ಡೌನ್ ಘೋಷಣೆಯಾದ ಬಳಿಕ ತಂದೆ ಸುಭಾಷ್ ಚಂದ್ ಜೊತೆಯಲ್ಲಿ ಮನೆಯಲ್ಲೇ ಸಿಲುಕಿದ್ದಾರೆ ಮನೋಜ್. ಇವರಿಗೆ ತಾಯಿ ಹಾಗೂ ಹಿರಿಯ ಅಕ್ಕ ಇದ್ದು, ಆಕೆಗೂ ದೃಷ್ಟಿ ಸಂಬಂಧ ಸವಾಲುಗಳಿವೆ.
ಹೇಗೂ ಹಬ್ಬದ ಮಾಸ ಇರುವ ಕಾರಣ, ಕ್ಯಾಂಡಲ್ ಮಾಡುವುದನ್ನು ಆರಂಭಿಸಿದರೆ ಸುಮ್ಮನೇ ಮನೆಯಲ್ಲಿ ಹಾಗೇ ಕೂತಿರುವುದು ತಪ್ಪುತ್ತದೆ ಹಾಗೂ ಜೀವನೋಪಾಯಕ್ಕೊಂದು ಮಾರ್ಗವೂ ಸಿಕ್ಕಂತಾಗುತ್ತದೆ ಎಂದು ಈ ಐಡಿಯಾ ಮಾಡಿರುವ ಮನೋಜ್‌ಗೆ ಅವರ ಕುಟುಂಬದ ನೆರವಿದೆ.