ಪಣಜಿ: ನವೆಂಬರ್ 1 ರಿಂದ ಕ್ಯಾಸಿನೋ ಪುನಾರಂಭಕ್ಕೆ ಗೋವಾ ಸರ್ಕಾರ ಅನುಮತಿ ನೀಡಿದೆ. ಮಾರ್ಗಸೂಚಿ ಪಾಲಿಸುವ ಮೂಲಕ ಕ್ಯಾಸಿನೋ ಪುನರಾರಂಭಕ್ಕೆ ಅವಕಾಶ ಕಲ್ಪಿಸಲು ಗೋವಾ ಸಿಎಂ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ಕ್ಯಾಸಿನೋದಲ್ಲಿ ಶೇಕಡ 50 ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕ್ಯಾಸಿನೋ ನಿರ್ವಾಹಕರು ಪರವಾನಿಗೆಯ ಶುಲ್ಕವನ್ನು ಪಾವತಿಸಿ ನವೆಂಬರ್ 1 ರಿಂದ ಕ್ಯಾಸಿನೋ ಆರಂಭಿಸಬಹುದು ಎಂದು ಹೇಳಲಾಗಿದೆ.