alex Certify ಮದುವೆಯಾದ ಮೂರೇ ತಿಂಗಳಿಗೆ ಪತಿಯಿಂದ ಪತ್ನಿ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಮೂರೇ ತಿಂಗಳಿಗೆ ಪತಿಯಿಂದ ಪತ್ನಿ ಹತ್ಯೆ

ಲಾಕ್​ಡೌನ್​ ಟೈಂನಲ್ಲಿ ಶುರುವಾಗಿದ್ದ ಪ್ರೀತಿ ಮದುವೆಯವರೆಗೂ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಥಾನಾ ಕ್ಷೇತ್ರದ ಜಾವ್ರಾ ಕಾಂಪೌಂಡ್​ ಇಲಾಖೆಯಲ್ಲಿ ಈ ಕೊಲೆ ನಡೆದಿದೆ. ಮದುವೆಯಾದ ಮೂರೇ ತಿಂಗಳಿಗೆ ಪತಿ ತನ್ನ ಪತ್ನಿಯ ಕುತ್ತಿಗೆಗೆ ನಾಯಿಗೆ ಹಾಕುವ ಚೈನ್​​ನಿಂದ ಬಿಗಿದು ಕೊಲೆ ಮಾಡಿದ್ದಾನೆ. ಹಾಗೂ ತಾನೇ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಪೊಲೀಸರು ಮೃತ ಮಹಿಳೆಯ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಂಶು ಶರ್ಮಾ ಹಾಗೂ ಹರ್ಷ ನಡುವೆ ಲಾಕ್​ಡೌನ್​ ಸಮಯದಲ್ಲಿ ಪ್ರೀತಿಯಾಗಿತ್ತು. ಆಗಸ್ಟ್​ನಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಪರಿವಾರದ ಕಲಹದಿಂದ ಬೇಸತ್ತ ಪತಿ ಮದುವೆಯಾದ ಮೂರೇ ತಿಂಗಳಿಗೆ ಪತ್ನಿ ಅಂಶು ಶರ್ಮಾಳನ್ನ ಕೊಲೆಗೈದಿದ್ದಾನೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...