ಮೊಬೈಲ್ ಜಗತ್ತಿನಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಒನ್ ಪ್ಲಸ್ ಸದ್ಯದಲ್ಲೇ ಸ್ಮಾರ್ಟ್ ವಾಚ್ಗಳನ್ನ ಬಿಡುಗಡೆ ಮಾಡುತ್ತೆ ಅಂತಾ ಹೇಳಲಾಗಿತ್ತು. ಆದರೆ ಇದೀಗ ಈ ಸ್ಮಾರ್ಟ್ ವಾಚ್ ಗಳು ಬರೋಕೆ ಇನ್ನಷ್ಟು ಸಮಯ ಹಿಡಿಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಆದರೆ ಒನ್ ಪ್ಲಸ್ ಯಾವ ಕಾರಣಕ್ಕೆ ಸ್ಮಾರ್ಟ್ ವಾಚ್ ಗಳ ಬಿಡುಗಡೆ ವಿಳಂಬ ಮಾಡ್ತಿದೆ ಅನ್ನೋದಕ್ಕೆ ಸರಿಯಾದ ಕಾರಣ ದೊರೆತಿಲ್ಲ. ಆದರೆ ಮೂಲಗಳ ಪ್ರಕಾರ ವಾಚ್ನಲ್ಲಿ ಸಾಫ್ಟ್ವೇರ್ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಅಂತಾ ಹೇಳಲಾಗ್ತಿದೆ.
ಒನ್ ಪ್ಲಸ್ 8 ಟಿ ಮೊಬೈಲ್ ಲೋಕಾರ್ಪಣೆ ವೇಳೆಯೇ ಕಂಪನಿ ಸ್ಮಾರ್ಟ್ ವಾಚ್ ಬಿಡುಗಡೆ ಬಗ್ಗೆಯೂ ಮಾಹಿತಿ ನೀಡಿತ್ತು. ಇನ್ನು ಒನ್ ಪ್ಲಸ್ ಸಹ ಸಂಸ್ಥಾಪಕ ಕಾರ್ಲ್ ಪೀ ಅವರ ನಿರ್ಗಮನ ಕೂಡ ಸ್ಮಾರ್ಟ್ ವಾಚ್ ಬಿಡುಗಡೆ ವಿಳಂಬಕ್ಕೆ ಕಾರಣ ಅಂತಾ ಹೇಳಲಾಗ್ತಿದೆ.
ಡಬ್ಲೂ 301 ಜಿಬಿ ಮಾದರಿಯ ಒನ್ ಪ್ಲಸ್ ವಾಚ್ ಐಎಂಡಿಎ ಪ್ರಮಾಣೀಕರಣವನ್ನ ಪಡೆದಿದೆ. ಒನ್ ಪ್ಲಸ್ ಸ್ಮಾರ್ಟ್ ವಾಚ್ ವೃತ್ತಾಕಾರದ ಡಯಲ್ ಹೊಂದಿದೆ ಅಂತಾ ಮೂಲಗಳು ತಿಳಿಸಿವೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ ವಾಚ್ಗಳಿಗಿಂತ ಇದರಲ್ಲಿ ಹೃದಯ ಬಡಿತ ಮಾನಿಟರ್, ಆಕ್ಟಿವಿಟಿ ಟ್ರ್ಯಾಕರ್ ಸೇರಿದಂತೆ ವಿವಿಧ ಹೆಚ್ಚುವರಿ ಆಪ್ಶನ್ಗಳನ್ನ ಹೊಂದಿದೆ.