alex Certify ಬ್ರೇಕಿಂಗ್ ನ್ಯೂಸ್: ಆನ್ ಲೈನ್ ತರಗತಿಗಳಿಗೆ ಮಾರ್ಗಸೂಚಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕಿಂಗ್ ನ್ಯೂಸ್: ಆನ್ ಲೈನ್ ತರಗತಿಗಳಿಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದ್ದು, ಪ್ರತಿ ತರಗತಿಯ ಗರಿಷ್ಠ ಸಮಯ 30 ನಿಮಿಷಗಳಿಗೆ ಸೀಮಿತಗೊಳಿಸಲಾಗಿದ್ದು, ವಯೋಮಾನಕ್ಕೆ ತಕ್ಕಂತೆ ದಿನಕ್ಕೆ 1-4 ತರಗತಿಗೆ ಅವಕಾಶ ನೀಡಲಾಗಿದೆ.

2ನೇ ತರಗತಿವರೆಗೆ ವಾರಕ್ಕೆ ಪರ್ಯಾಯ ದಿನಗಳಲ್ಲಿ ಬೋಧನೆ ಮಾಡಬಹುದಾಗಿದ್ದು, 3ನೇ ತರಗತಿ ನಂತರ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ಬೋಧನೆ ಮಾಡಬಹುದು.

2ನೇ ತರಗತಿ ವಿದ್ಯಾರ್ಥಿಗಳಿಗೆ ಪೋಷಕರ ಹಾಜರಿ ಕಡ್ಡಾಯವಾಗಿದೆ. ಒಂದು ವೇಳೆ ಸಾಧ್ಯವಿಲ್ಲದಿದ್ದರೆ ಪೋಷಕರು ಅನುಮತಿ ನೀಡಿದರೆ ವಯಸ್ಕರು ಉಪಸ್ಥಿತರಿರಲು ಅವಕಾಶ ನೀಡಬಹುದು.

3-5ನೇ ತರಗತಿವರೆಗೆ ದಿನಕ್ಕೆ 30 ನಿಮಿಷಗಳ 2 ಕ್ಲಾಸ್ ತೆಗೆದುಕೊಳ್ಳಬಹುದು. 6-8ನೇ ತರಗತಿವರೆಗೆ ದಿನಕ್ಕೆ 30-45 ನಿಮಿಷಗಳವರೆಗೆ 3 ಕ್ಲಾಸ್ ತೆಗೆದುಕೊಳ್ಳಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...