alex Certify ಬಿಜೆಪಿ ನಾಯಕನ ಮನೆಯಲ್ಲಿದ್ದ ಗಾಯಕನ ಮೇಲೆ ಫೈರಿಂಗ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ನಾಯಕನ ಮನೆಯಲ್ಲಿದ್ದ ಗಾಯಕನ ಮೇಲೆ ಫೈರಿಂಗ್​..!

ಬಿಜೆಪಿ ಸ್ಥಳೀಯ ನಾಯಕನ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಭೋಜ್​ಪುರಿ ಗಾಯಕ ಹಾಗೂ ನಟ ಗೋಲು ರಾಜರಿಗೆ ಅಚಾನಕ್ಕಾಗಿ ಗುಂಡು ತಾಕಿದೆ.

ಉತ್ತರ ಪ್ರದೇಶದ ಮಹಾಕರ್ಪೂರ್​ ಹಳ್ಳಿಯಲ್ಲಿ ಬಿಜೆಪಿ ಸ್ಥಳೀಯ ನಾಯಕ ಭಾನು ದುಬೆ ಪುತ್ರನ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ನಡೆಯುತ್ತಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕ ಗೋಲುರಾಜ ಸಹ ಭಾಗಿಯಾಗಿದ್ರು. ಆದರೆ ಸಂಭ್ರಮದ ಮಸ್ತಿಯಲ್ಲಿ ಸಿಡಿಸಿದ ಗುಂಡೊಂದು ಅಚಾನಕ್ಕಾಗಿ ಗೋಲುರಾಜರಿಗೆ ತಾಕಿದೆ.

ಫೈರಿಂಗ್​ನಿಂದಾಗಿ ಗೋಲು ರಾಜ ಗಾಯಗೊಂಡಿದ್ದು ಬುಕ್ಸಾರ್​ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಗೆ ಶಿಫ್ಟ್ ಮಾಡಲಾಗಿದೆ ಅಂತಾ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...