ಬೆಂಗಳೂರು: ಉಪಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳ ಮತಭೇಟೆ ಜೋರಾಗಿ ಸಾಗಿದೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೊಸ ಬಾಂಬ್ ಸಿಡಿಸಿದ್ದು, ಆರ್.ಆರ್.ನಗರ ಮತ್ತೊಂದು ಡಿ.ಜೆ ಹಳ್ಳಿಯಾದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಆರ್.ಆರ್.ನಗರದಲ್ಲಿರುವ ಮುಸ್ಲೀಂ ಸಮುದಾಗಳ ಪ್ರದೇಶಗಳಲ್ಲಿ ಪ್ರಚಾರದ ಹೆಸರಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಅಲ್ಲಿನ ಜನರನ್ನು ಕೆಣಕಿದ್ದಾರೆ. ಆರ್.ಆರ್.ನಗರ ಮತ್ತೊಂದು ಡಿ.ಜೆ ಹಳ್ಳಿಯಾದರೂ ಅಚ್ಚರಿಯಿಲ್ಲ. ಬೆಂಗಳೂರಿನ ನೆಮ್ಮದಿ ಹಾಳುಮಾಡುವುದೇ ಅವರ ಹುಟ್ಟುಗುಣ ಎಂದು ಗುಡುಗಿದರು.
ಇನ್ನು ಯಾರ ಭದ್ರಕೋಟೆಯನ್ನೂ ಯಾರೂ ಛಿದ್ರ ಮಾಡಲು ಸಾಧ್ಯವಿಲ್ಲ. ನಾವು ಮತದಾರರ ಬಳಿ ಮತ ಭಿಕ್ಷೆ ಕೇಳುತ್ತಿದ್ದೇವೆ. ಅಭಿವೃದ್ಧಿ ನೋಡಿ ಮತದಾರರು ವೋಟ್ ಹಾಕುತ್ತಾರೆ ಎಂದು ಹೇಳಿದರು.