ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾಸ್ಕ್ ಧರಿಸುವ ರೂಲ್ಸ್ ನಲ್ಲಿ ಬಿಬಿಎಂಪಿ ಬದಲಾವಣೆ ತಂದಿದ್ದು, ವಾಹನ ಸವಾರರಿಗೆ ಶಾಕ್ ನೀಡಿದೆ. ಆದರೆ 5 ವರ್ಷದವರೆಗಿನ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದಿದೆ.
ಬೈಕ್, ಕಾರು ಮುಂತಾದ ವಾಹನಗಳಲ್ಲಿ ಒಬ್ಬರೇ ಇದ್ದರು ಕೂಡ ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ಮಾರುಕಟ್ಟೆಗೆ ಹೋಗುವಾಗ, ಅಂಗಡಿಗಳಿಗೆ ಹೋಗುವಾಗ ಜನರು ಮಾಸ್ಕ್ ಧರಿಸಲೇಬೇಕು. ಒಂದುವೇಳೆ ಮಾಸ್ಕ್ ಧರಿಸದಿದ್ದರೆ 250 ರೂ ದಂಡ ವಸೂಲಿ ಮಾಡಲಾಗುವುದು ಎಂದು ಪಾಲಿಕೆ ತಿಳಿಸಿದೆ.
ಇನ್ನು 5 ವರ್ಷದವರೆಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಿಲ್ಲ, ಇನ್ನು ಈಜುಕೊಳದಲ್ಲಿ ಈಜುವಾಗ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಶ್ರವಣ ಸಾಧನ ಅಳವಡಿಕೆ ಮಾಡಿಕೊಂಡವರಿಗೆ, ಉಸಿರಾಟ ಹಾಗೂ ಹಲ್ಲಿನ ತೊಂದರೆ ಇದ್ದವರಿಗೆ ಮಾಸ್ಕ್ ನಿಂದ ವಿನಾಯಿತಿ ನೀಡಲಾಗಿದೆ.