ಬೆಂಗಳೂರು: ಕಾರ್ ಚಲಾಯಿಸುವಾಗ ಒಬ್ಬರು ಇದ್ದರೂ ಕೂಡ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಕಡ್ಡಾಯವಲ್ಲ ಎಂದು ಬಿಬಿಎಂಪಿ ಹೇಳಿದೆ.
ಕೊರೋನಾ ಸೋಂಕು ತಡೆಗೆ ಮಾಸ್ಕ್ ಸಂಬಂಧ ನಿಯಮ ಪರಿಷ್ಕರಿಸಲಾಗಿದ್ದು, ಕಾರ್ ಲ್ಲಿ ಗ್ಲಾಸ್ ಏರಿಸಿದ್ದರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಾರ್ ನಲ್ಲಿ ಒಬ್ಬರೇ ಇದ್ದರೂ, ಬೈಕ್ ನಲ್ಲಿ ಒಬ್ಬರೇ ಸವಾರಿ ಮಾಡುತ್ತಿದ್ದರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಹಾಕುವುದು ಕಡ್ಡಾಯವಲ್ಲ. ಶಾಲೆ-ಕಾಲೇಜು, ಚಿತ್ರಮಂದಿರ, ಸಾರ್ವಜನಿಕ ಶೌಚಾಲಯ, ರೈಲ್, ಬಸ್, ವಿಶ್ರಾಂತಿ ಗೃಹ, ಕ್ರೀಡಾಂಗಣ, ಮಾಲ್, ಮಾರುಕಟ್ಟೆ, ಅಂಗಡಿ ಮಳಿಗೆ ಮೊದಲಾದ ಕಡೆಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ.
ಹೋಟೆಲ್, ರೆಸ್ಟೋರೆಂಟ್ ಮೊದಲಾದ ಕಡೆ ಕೆಲಸ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹೋಟೆಲ್ ಗಳಲ್ಲಿ ಊಟ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸಲು ವಿನಾಯಿತಿ ಇರುತ್ತದೆ.