alex Certify ಕೇವಲ 1 ರೂಪಾಯಿಗೆ ಇಲ್ಲಿ ಸಿಗುತ್ತೆ ಹೊಟ್ಟೆ ತುಂಬಾ ಊಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 1 ರೂಪಾಯಿಗೆ ಇಲ್ಲಿ ಸಿಗುತ್ತೆ ಹೊಟ್ಟೆ ತುಂಬಾ ಊಟ…!

This Food Joint in Delhi is Offering Full Thali at Re 1, Feeds Over 1,000 People Daily

ದೆಹಲಿಯ ಸ್ಟಾರ್​ ರೆಸ್ಟೋರೆಂಟ್​ ಹಾವಳಿಗಳ ನಡುವೆ ಶ್ಯಾಮ್​ ರಸೋಯಿ ಎಂಬ ಹೋಟೆಲ್​ ಊಹೆಗೂ ನಿಲುಕದ ದರದಲ್ಲಿ ಆಹಾರ ಪೂರೈಕೆ ಮಾಡುವ ಮೂಲಕ ರಾಜಧಾನಿ ಜನತೆಯ ಮನಸ್ಸನ್ನ ಗೆಲ್ಲುತ್ತಿದೆ. ಕೇವಲ 1 ರೂಪಾಯಿಗೆ ಜನರಿಗೆ ಹೊಟ್ಟೆ ತುಂಬಾ ಆಹಾರ ನೀಡ್ತಿರುವ ಶ್ಯಾಮ್​ ರಸೋಯಿ ದೆಹಲಿಯ ಜನಪ್ರಿಯ ತಾಣಗಳಲ್ಲಿ ಒಂದಾಗಿಬಿಟ್ಟಿದೆ.

ಕಳೆದ 2 ತಿಂಗಳಿನಿಂದ ಈ ಅಂಗಡಿಯನ್ನ ಪರ್ವೀನ್​ ಕುಮಾರ್​ ಗೋಯೆಲ್​ ಎಂಬವರು ನಡೆಸಿಕೊಂಡು ಹೋಗ್ತಿದ್ದಾರೆ. ಪ್ರತಿದಿನ ಇಲ್ಲಿ 1000ಕ್ಕಿಂತ ಹೆಚ್ಚು ಜನರಿಗೆ ಊಟ ಬಡಿಸಲಾಗುತ್ತೆ. ಹಾಗೂ ಇಂದ್ರಲೋಕ, ಸಾಯಿ ಮಂದಿರ ಸೇರಿದಂತೆ ಹತ್ತಿರದ ಏರಿಯಾಗಳಿಗೆ 1000 ಊಟದ ಪಾರ್ಸೆಲ್​ ಕಳಿಸುತ್ತಿದ್ದಾರೆ.

ಈ ಅಂಗಡಿಯ ವಿಶೇಷತೆ ಏನೆಂದರೆ ಇಲ್ಲಿಯ ಅಡುಗೆಗೆ ಫಿಕ್ಸ್ ಹಣ ಅಂತಾ ಇಲ್ಲ. ಇಷ್ಟವಿದ್ದರು ದೇಣಿಗೆ ನೀಡಬಹುದು. ಇಲ್ಲವೇ ಆಹಾರಧಾನ್ಯವನ್ನೂ ನೀಡಬಹುದಂತೆ. ಈ ಮೊದಲು ಈ ಹೋಟೆಲ್​ನಲ್ಲಿ 10 ರೂಪಾಯಿಗೆ ಊಟವನ್ನ ನೀಡಲಾಗ್ತಿತ್ತು. ಆದರೆ ಇದೀಗ ಕೇವಲ 1 ರೂಪಾಯಿಗೆ ಊಟ ಸಿಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...