ಸಂಪೂರ್ಣ ಭಾರತವೇ ದಸರಾ ಹಬ್ಬದ ಸಂಭ್ರಮದಲ್ಲಿ ಮಿಂದೆಳ್ತಾ ಇದ್ದರೆ ಆಗ್ರಾದ ತಾಜ್ಮಹಲ್ನಲ್ಲಿ ದಸರಾ ದಿನದಂದು ದೊಡ್ಡ ಹಂಗಾಮವೇ ನಡೆದಿದೆ. ತಾಜ್ಮಹಲ್ನಲ್ಲಿ ಕೇಸರಿ ಧ್ವಜ ಹಾರೋದ್ರ ಜೊತೆಗೆ ಶಿವ ಸ್ತೋತ್ರವನ್ನ ಪಠಿಸಲಾಗಿದೆ.
ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿ ಹಾಗೂ ಕಾರ್ಯಕರ್ತರು ತಾಜ್ಮಹಲ್ ಪ್ರೇಮ ಸ್ಮಾರಕದಲ್ಲಿ ಕೇಸರಿ ಧ್ವಜವನ್ನ ಹಾರಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ಪದಾಧಿಕಾರಿ ಗೌರವ್ ಠಾಕೂರ್ ತಾಜ್ ಸಂಕೀರ್ಣದ ಒಳಗೆ ಶಿವ ಸ್ತೋತ್ರ ಪಠಿಸಿದ್ದಾರೆ.
ಠಾಕೂರ್ ಸಂಕೀರ್ಣದಲ್ಲಿ ಕೂತು ಶಿವ ಸ್ತೋತ್ರ ಪಠಿಸುತ್ತಿರುವ ವೇಳೆ ಕಾರ್ಯಕರ್ತನೊಬ್ಬ ಕೇಸರಿ ಧ್ವಜವನ್ನು ಹಾರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ.
ಇನ್ನು ಈ ಘಟನೆ ಬಗ್ಗೆ ಮಾತನಾಡಿದ ಗೌರವ್ ಠಾಕೂರ್, ನಮ್ಮ ಸಂಘಟನೆ ತಾಜ್ಮಹಲ್ನ್ನು ಶಿವನ ದೇವಾಲಯ ಎಂದು ನಂಬಿದೆ. ಶಿವನ ಮಂದಿರವನ್ನ ನೆಲಸಮ ಮಾಡಿದ ಮೊಘಲ್ ಚಕ್ರವರ್ತಿ ಶಹಜಹಾನ್ ಇದನ್ನ ಸ್ಮಾರಕ ಮಾಡಿದ್ದಾನೆ. ಹೀಗಾಗಿ ನಾವಿಲ್ಲಿ ಶಿವ ಸ್ತೋತ್ರ ಪಠಿಸಿದ್ದೇವೆ ಅಂತಾ ಹೇಳಿದ್ರು.
ಇನ್ನು ತಾಜ್ಮಹಲ್ನಲ್ಲಿ ಕೇಸರಿ ಧ್ವಜ ಹಾರಿಸಿದ ಯುವಕರನ್ನ ಸಿಐಎಸ್ಎಫ್ ಪಡೆ ವಶಕ್ಕೆ ಪಡೆದಿದೆ ಅಂತಾ ವರದಿಗಳು ತಿಳಿಸಿವೆ . ಕಳೆದ ವರ್ಷ ಕೂಡ ತಾಜ್ ಮಹಲ್ನಲ್ಲಿ ಗಂಗಾಭಿಷೇಕ ಮಾಡಲು ಹಿಂದೂ ಜಾಗರಣ ವೇದಿಕೆ ಯತ್ನಿಸಿತ್ತು. ಆದರೆ ಇದಕ್ಕೆ ಭದ್ರತಾ ಪಡೆ ತಡೆಯೊಡ್ಡಿತ್ತು.