ಬಾಲಿವುಡ್ ನಟಿ ಮಾಲ್ವಿ ಮಲ್ಹೋತ್ರಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಂತ್ರ ಮಾಲ್ವಿ ಮಲ್ಹೋತ್ರಾರನ್ನು ಮುಂಬೈನ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟಿಗೆ ಅಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಾಲ್ವಿಯ ಸ್ನೇಹಿತನೊಬ್ಬ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಚಿಕಿತ್ಸೆಯ ನಂತರ ಈಗ ನಟಿಯ ಸ್ಥಿತಿ ಸುಧಾರಿಸುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಮಾಲ್ವಿಯ ಹಳೆ ಸ್ನೇಹಿತ ನಿನ್ನೆ ರಾತ್ರಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸ್ನೇಹಿತ ಚಾಕುವಿನಿಂದ ಮೂರು ಬಾರಿ ಇರಿದಿದ್ದಾನೆ. ಇದಾದ ನಂತ್ರ ಮಾಲ್ವಿ ಮುಖದ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಎನ್ನಲಾಗಿದೆ. ಆದ್ರೆ ಕೈ ಅಡ್ಡ ಹಿಡಿದು ಮಾಲ್ವಿ ಮುಖದ ಮೇಲೆ ದಾಳಿಯಾಗದಂತೆ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ.
ಸ್ನೇಹಿತ ಯಾವ ಕಾರಣಕ್ಕೆ ಹಲ್ಲೆ ನಡೆಸಿದ್ದಾನೆಂಬುದು ಬಹಿರಂಗವಾಗಿಲ್ಲ. ಮಾಲ್ವಿ ಮಲ್ಹೋತ್ರಾ ಕಲರ್ಸ್ ಟಿವಿಯ ಫ್ಲೈಯಿಂಗ್ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಿಂದಿ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.