ತಲೆಹೊಟ್ಟು ಸಮಸ್ಯೆಯಿಂದ ರೋಸಿ ಹೋಗಿದ್ದೀರಾ, ಜಾಹಿರಾತುಗಳಲ್ಲಿ ತೋರಿಸುವಂತೆ ತಲೆ ಬಾಚುವಾಗ ನಿಮ್ಮ ಉಡುಪಿನ ಮೇಲೂ ಬಿಳಿಯ ಧೂಳಿನ ಕಣಗಳಂತ ವಸ್ತು ಕೂತು ಅಸಹ್ಯ ಉಂಟುಮಾಡುತ್ತಿದೆಯೇ, ಹಾಗಿದ್ದರೆ ಇಲ್ಲಿ ಕೇಳಿ… ತಲೆಹೊಟ್ಟು ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲಿದೆ.
ಅರ್ಧ ಕಪ್ ಮೊಸರಿಗೆ ಒಂದು ಚಮಚ ಲೋಳೆರಸ ಸೇರಿಸಿ. ಅರ್ಧ ನಿಂಬೆ ರಸ ಹಿಂಡಿ. ಚೆನ್ನಾಗಿ ಬೆರೆಸಿ. ಒಂದು ಚಿಟಿಕೆ ಅರಶಿನ ಹಾಕಿ. ಎರಡು ಸಣ್ಣ ಕರ್ಪೂರ ಪುಡಿ ಮಾಡಿ ಇದರೊಂದಿಗೆ ಬೆರೆಸಿ. ವಿಟಮಿನ್ ಇ ಕ್ಯಾಪ್ಸೂಲ್ ಕತ್ತರಿಸಿ ಹಾಕಿ. ಎರಡು ಚಮಚ ಹರಳೆಣ್ಣೆ ಇಲ್ಲವೇ ಎಳ್ಳೆಣ್ಣೆ ಬೆರೆಸಿ.
ಈ ಮಿಶ್ರಣವನ್ನು ಚೆನ್ನಾಗಿ ಕದಡಿ. ನಿಮ್ಮ ಕೂದಲಿನ ಬುಡಕ್ಕೆ ಸರಿಯಾಗಿ ಹಚ್ಚಿ. ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.
ಸೀಗೆಕಾಯಿಯಿಂದ ತಲೆ ತೊಳೆಯಿರಿ. ಇದನ್ನು ಬಳಸಿದ ಬಳಿಕ ಯಾವುದೇ ಕಾರಣಕ್ಕೆ ಕೆಮಿಕಲ್ ಬಳಸಿದ ಶ್ಯಾಂಪು ಹಚ್ಚಿಕೊಳ್ಳದಿರಿ. ತಲೆಹೊಟ್ಟು ಹೆಚ್ಚಿದ್ದರೆ ಇದನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಪುನರಾವರ್ತಿಸಿ. ಬಹುಕಾಲದಿಂದ ಕಾಡುವ ನಿಮ್ಮ ತಲೆಹೊಟ್ಟು ಸಮಸ್ಯೆಗೆ ವಿದಾಯ ಹೇಳಿ.