alex Certify TET ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

TET ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಪಾಸಾದವರಿಗೆ ಸಿಹಿ ಸುದ್ದಿ ಇಲ್ಲಿದೆ. ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರದ ಮಾನ್ಯತಾ ಅವಧಿಯನ್ನು ನಿರ್ದಿಷ್ಟ ವರ್ಷಗಳಿಗೆ ಬದಲಾಗಿ ಜೀವಿತಾವಧಿಯವರೆಗೆ ವಿಸ್ತರಣೆ ಮಾಡಲಾಗಿದೆ.

ಶಿಕ್ಷಕರಾಗಲು ಟಿಇಟಿ ಕಡ್ಡಾಯವಾಗಿ ಪಾಸ್ ಆಗಬೇಕಿದೆ. ಒಂದು ಸಲ ಟಿಟಿ ಪಾಸಾದರೆ 7 ವರ್ಷದವರೆಗೆ ಅದಕ್ಕೆ ಮಾನ್ಯತೆ ಇರುತ್ತಿತ್ತು. ಎನ್ಇಟಿ 50ನೇ ಸಾಮಾನ್ಯಸಭೆಯಲ್ಲಿ ಟಿಇಟಿ ಮಾನ್ಯತಾ ಪ್ರಮಾಣಪತ್ರದ ಅವಧಿಯನ್ನು ಜೀವಿತಾವಧಿಯವರೆಗೆ ವಿಸ್ತರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಇನ್ನು ರಾಜ್ಯದಲ್ಲಿ ಕೊರೋನಾ ನಡುವೆಯೂ ಇತ್ತೀಚೆಗೆ ಟಿಇಟಿ ಪರೀಕ್ಷೆ ನಡೆಸಲಾಗಿದ್ದು ಸುಮಾರು 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ವರ್ಷದಿಂದಲೇ ಹೊಸ ನಿಯಮ ಅನ್ವಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...