ನವದೆಹಲಿ: ಎಲ್ಪಿಜಿ ಗ್ರಾಹಕರು ಇನ್ನು ಮುಂದೆ ಸಿಲಿಂಡರ್ ಪಡೆಯಲು ಒಟಿಪಿ ನೀಡಬೇಕಿದೆ. ಎಲ್ಪಿಜಿ ಸಿಲಿಂಡರ್ ವಿತರಣೆಗಾಗಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ನವೆಂಬರ್ 1 ರಿಂದ ಸಿಲಿಂಡರ್ ವಿತರಣೆಯ ನಿಯಮದಲ್ಲಿ ಬದಲಾವಣೆಯಾಗಲಿದೆ. ತಪ್ಪಾದ ಮಾಹಿತಿ ಸಿಲಿಂಡರ್ ಗಳ ವಿತರಣೆ ಸ್ಥಗಿತಗೊಳಿಸಲು, ದುರ್ಬಳಕೆ ತಡೆಯಲು ಮತ್ತು ನಿಖರವಾದ ಗ್ರಾಹಕರನ್ನು ಗುರುತಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಹೊಸ ವ್ಯವಸ್ಥೆಯನ್ನು ಸಿಲಿಂಡರ್ ವಿತರಣೆ ಜಾರಿಗೆ ತರಲಾಗುತ್ತಿದೆ.
ಡೆಲಿವರಿ ದೃಢೀಕರಣ ಕೋಡ್ ಮೂಲಕ ಗ್ರಾಹಕರ ಮಾಹಿತಿ ಪಡೆಯಲಾಗುವುದು. ನವೆಂಬರ್ 1ರಿಂದ ಸಿಲಿಂಡರ್ ವಿತರಣೆ ಸಂದರ್ಭದಲ್ಲಿ ಒಟಿಪಿ ನೀಡಲಾಗುತ್ತದೆ. ಒಟಿಪಿಯನ್ನು ನೀಡದಿದ್ದರೆ ಸಿಲಿಂಡರ್ ಪಡೆಯಲು ಸಾಧ್ಯವಾಗುವುದಿಲ್ಲ.
ಗ್ಯಾಸ್ ಬುಕ್ ಮಾಡಿದ ಗ್ರಾಹಕರ ಮೊಬೈಲ್ಗೆ ಒಟಿಪಿ ಕಳುಹಿಸಲಾಗುತ್ತದೆ. ಸಿಲಿಂಡರ್ ವಿತರಣೆಗೆ ಬಂದ ಸಂದರ್ಭದಲ್ಲಿ ಡೆಲಿವರಿ ಬಾಯ್ ಗೆ ಒಟಿಪಿ ನೀಡಬೇಕು. ನಂತರ ಗ್ರಾಹಕರಿಗೆ ಸಿಲಿಂಡರ್ ವಿತರಿಸಲಾಗುವುದು. ನವೆಂಬರ್ 1 ರಿಂದಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.