ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತವಾಗಿರುವ ’ಟೈಮ್’ ನಿಯಕಾಲಿಕೆ ತನ್ನ ಶತಮಾನದ ಇತಿಹಾದಲ್ಲಿ ಇದೇ ಮೊದಲ ಬಾರಿಗೆ ಲೋಗೋ ಬದಲಾವಣೆ ಮಾಡಿದೆ.
ನವೆಂಬರ್ 2ಎ ದಿನಾಂಕಕ್ಕೆ ಡಬಲ್ ಇಶ್ಯೂ ಬಿಡುಗಡೆ ಮಾಡಿರುವ TIME ನಿಯತಕಾಲಿಕೆ, ಈ ವಾರದ ತನ್ನ ಅವತರಣಿಕೆಗೆ ”VOTE” ಎಂದು ಟೈಟಲ್ ಹೆಡಿಂಗ್ ಕೊಟ್ಟಿದೆ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ತನ್ನ ಓದುಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗಿಯಾಗಲು ಪ್ರೋತ್ಸಾಹ ಕೊಡಲು ಟೈಮ್ ಹೀಗೆ ಮಾಡಿದೆ.
ಕೋವಿಡ್-19 ಸಾಂಕ್ರಮಿಕದ ನಡುವೆ ಸಕಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಮತಗಟ್ಟೆಗಳಿಗೆ ಹೋಗಿ ವೋಟ್ ಮಾಡಲು ಓದುಗರಿಗೆ ಪ್ರೇರಣೆ ಕೊಡಲೆಂದು ಮಾಸ್ಕ್ ಧಾರಿ ಮಹಿಳೆಯ ಚಿತ್ರವೊಂದು ಈ ವಾರದ ಟೈಂ ಮ್ಯಾಗಝಿನ್ ಮುಖಪುಟದಲ್ಲಿ ಹಾಕಲಾಗಿದೆ.