ಬೆಳಗಾವಿ: ಸುರೇಶ್ ಅಂಗಡಿ ಬದುಕಿದ್ದರೆ ಎರಡು-ಮೂರು ತಿಂಗಳಲ್ಲಿ ದೊಡ್ಡ ಹುದ್ದೆಗೆ ಏರುತ್ತಿದ್ದರು. ಅವರಿಗೆ ದೊಡ್ಡ ಹುದ್ದೆ ಸಿಗುತ್ತಿತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಮಾತನಾಡಿದ ಅವರು, ಸುರೇಶ್ ಅಂಗಡಿ ಅವರಿದ್ದಿದ್ದರೆ ಒಳ್ಳೆಯ ಭವಿಷ್ಯ ಇರುತ್ತಿತ್ತು. ಅವರಿಗೆ ದೊಡ್ಡ ಹುದ್ದೆ ಸಿಗುತ್ತಿತ್ತು. ಆದರೆ, ಅವರು ನಮ್ಮನ್ನಗಲಿದ್ದು ದುರ್ದೈವದ ಸಂಗತಿಯಾಗಿದೆ ಒಳ್ಳೆಯವರನ್ನು ಆ ದೇವರು ಬೇಗ ಕರೆದುಕೊಳ್ಳುತ್ತಾನೆ ಎಂದು ಹೇಳಿದ್ದಾರೆ.
ಸುರೇಶ್ ಅಂಗಡಿ ಸಿಎಂ ಆಗುತ್ತಿದ್ದರು ಎಂದು ಇತ್ತೀಚೆಗೆ ಅವರ ಸೋದರಮಾವ ಲಿಂಗರಾಜ್ ಪಾಟೀಲ್ ಹೇಳಿದ್ದರು. ಇವತ್ತು ರಮೇಶ್ ಜಾರಕಿಹೊಳಿ, ಸುರೇಶ್ ಅಂಗಡಿ ಬದುಕಿದ್ದರೆ ಎರಡು-ಮೂರು ತಿಂಗಳಲ್ಲಿ ದೊಡ್ಡ ಹುದ್ದೆಗೆ ಏರುತ್ತಿದ್ದರು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.