ಪಿಂಚಣಿ ಖಾತೆದಾರರು ಜೀವ ಪ್ರಮಾಣ ಪತ್ರ ಸಲ್ಲಿಕೆಯ ಗಡುವನ್ನು ಸರ್ಕಾರ ವಿಸ್ತರಿಸಿದೆ. ಪಿಂಚಣಿದಾರರು ಲೈಫ್ ಸರ್ಟಿಫಿಕೇಟ್ ನೀಡಬೇಕಿದೆ. ಇಲ್ಲದಿದ್ದರೆ ಪಿಂಚಣಿ ಸ್ಥಗಿತವಾಗಲಿದೆ.
ಪಿಂಚಣಿ ಖಾತೆದಾರರು ಪಿಂಚಣಿ ಖಾತೆಗಳಿಗಾಗಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು/ನವೀಕರಿಸಲು ಡಿಸೆಂಬರ್ 31ರ ವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. ಆನ್ಲೈನ್ ಮೂಲಕವೂ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು. ಪಿಂಚಣಿ ಖಾತೆ ಇರುವ ಯಾವುದೇ ಬ್ಯಾಂಕ್ ಶಾಖೆಗೆ ಹೋಗಿ ಜೀವ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬಹುದು.
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಪಿಪಿಒ ಆದೇಶದ ಸಂಖ್ಯೆ ಹಾಗೂ ಪಿಂಚಣಿ ಖಾತೆ ಸಂಖ್ಯೆ ನೀಡಬೇಕಿದೆ. ಉಮಂಗ್ ಅಪ್ ಮೂಲಕವೂ ಜನರೇಟರ್ ಲೈಫ್ ಸರ್ಟಿಫಿಕೇಟ್ ಆಯ್ಕೆ ಮಾಡಿಕೊಂಡು ಪಿಂಚಣಿದಾರರು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು. ಪಿಂಚಣಿದಾರರು ಜೀವ ಪ್ರಮಾಣ ಪತ್ರ ಸಲ್ಲಿಕೆ ವಿವರಗಳಿಗಾಗಿ www.jeevanpramaan.gov.in ಗಮನಿಸಬಹುದಾಗಿದೆ.