ಬೆಂಗಳೂರು: ನಟ ಧನ್ವೀರ್ ಗೌಡ ವಿರುದ್ಧ ಬಂಡೀಪುರದಲ್ಲಿ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಬಂಡೀಪುರದ ಜಿಎಸ್ ಬೆಟ್ಟದಲ್ಲಿ ಅವರು ರಾತ್ರಿ ಸಫಾರಿ ನಡೆಸಿದ್ದಾರೆ. ನಿಷೇಧಿತ ಪ್ರದೇಶದೊಳಗೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ರಾತ್ರಿ ಅಲ್ಲ ಸಂಜೆ ಸಫಾರಿ ಮಾಡಿದ್ದಾಗಿ ಧನ್ವೀರ್ ಸ್ಪಷ್ಟನೆ ನೀಡಿದ್ದಾರೆ. ಆರ್.ಎಫ್.ಒ. ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಇದಲ್ಲದೆ, ಅತ್ತಿಗೋಡು ಆನೆ ಶಿಬಿರಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಆನೆ ಮೇಲೆ ಹತ್ತಿದ್ದ ಹಿನ್ನೆಲೆಯಲ್ಲಿ ಧನ್ವೀರ್ ಮತ್ತು ಅವರ ಐವರು ಸ್ನೇಹಿತರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಇದರೊಂದಿಗೆ ಬಂಡೀಪುರದಲ್ಲಿ ಕೂಡ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.