alex Certify 2015ರ ಬಿಹಾರ ಚುನಾವಣೆಗೆ ಬಿಜೆಪಿ ವ್ಯಯಿಸಿದ ಹಣವೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2015ರ ಬಿಹಾರ ಚುನಾವಣೆಗೆ ಬಿಜೆಪಿ ವ್ಯಯಿಸಿದ ಹಣವೆಷ್ಟು ಗೊತ್ತಾ…?

ಬಿಹಾರ ಚುನಾವಣೆಗೆ ದಿನಗಣನೆ ಶುರುವಾಗಿದೆ . 2015ರಲ್ಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಉಳಿದ ಪಕ್ಷಗಳಿಗಿಂತ 117 ಕೋಟಿಗಿಂತ ಹೆಚ್ಚು ರೂಪಾಯಿಯನ್ನ ಪ್ರಚಾರಕ್ಕೆ ಬಳಕೆ ಮಾಡಿದೆ.

2015ರ ಚುನಾವಣೆಯಲ್ಲಿ ಬಿಜೆಪಿ 135 ಕೋಟಿ ರೂಪಾಯಿಯನ್ನ ಪ್ರಚಾರಕ್ಕೆ ಬಳಸಿಕೊಂಡಿದ್ದರೆ ಕಾಂಗ್ರೆಸ್​, ಜೆಡಿ(ಯು), ಸಮಾಜವಾದಿ ಪಕ್ಷ ಹಾಗೂ ಬಿಎಸ್​ಪಿ ಖರ್ಚು ಮಾಡಿದ ಹಣವನ್ನ ಒಟ್ಟುಗೂಡಿಸಿದ್ರೂ 20 ಕೋಟಿ ರೂಪಾಯಿ ದಾಟಿಲ್ಲ. ಈ ಎಲ್ಲ ಪಕ್ಷಗಳಿಗಿಂದ ಬಿಜೆಪಿ 72.9 ಪ್ರತಿಶತದಷ್ಟು ಅಧಿಕ ಹಣವನ್ನ ಖರ್ಚು ಮಾಡಿದೆ.

ಕಾಂಗ್ರೆಸ್​ ಪಕ್ಷ ಪ್ರಚಾರಕ್ಕಾಗಿ 18 ಕೋಟಿ ರೂಪಾಯಿ ವ್ಯಯಿಸಿದೆ. ಜೆಡಿ(ಯು) 13 ಕೋಟಿ ಹಾಗೂ ಬಿಎಸ್​ಪಿ 4 ಕೋಟಿ ರೂಪಾಯಿಯನ್ನ ಚುನಾವಣಾ ಕ್ಯಾಂಪೇನ್​ಗಾಗಿ ವ್ಯಯ ಮಾಡಿದೆ. ಈ ಮೂಲಕ ಎಲ್ಲ ಪಕ್ಷಗಳು 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 190 ಕೋಟಿ ರೂಪಾಯಿ ಖರ್ಚು ಮಾಡಿವೆ.

ಚುನಾವಣಾ ಕ್ಯಾಂಪೇನ್​ನಲ್ಲಿ ಬಿಜೆಪಿ ಪ್ರಚಾರ, ಪ್ರಯಾಣ ವೆಚ್ಚ, ಅಭ್ಯರ್ಥಿಗಳಿಗೆ ಹಣ ಸೇರಿದಂತೆ ವಿವಿಧ ಕಾರ್ಯಗಳಿಗೆ ಹಣ ಖರ್ಚು ಮಾಡಿದೆ. ಪ್ರಚಾರ ಕಾರ್ಯಕ್ಕೆಂದೇ ಬಿಜೆಪಿ 60 ಕೋಟಿ ರೂಪಾಯಿ ಮೀಸಲಿಟ್ಟಿದೆ. 40 ಕೋಟಿ ರೂಪಾಯಿ ಮೀಡಿಯಾ ಜಾಹೀರಾತಿಗೆ, 10 ಕೋಟಿ ಕಟೌಟ್​ ಬ್ಯಾನರ್​ ಸೇರಿದಂತೆ ಪ್ರಚಾರದ ಬಳಸಲ್ಪಡುವ ವಸ್ತುಗಳಿಗೆ ಹಾಗೂ 9 ಕೋಟಿ ರೂಪಾಯಿಯನ್ನ ಸಾರ್ವಜನಿಕ ಸಭೆಗಾಗಿ ವ್ಯಯಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...