ಮುಂಬೈ: ಹಣದುಬ್ಬರ ಪ್ರಮಾಣ ಕಡಿಮೆಯಾದಲ್ಲಿ ಬಡ್ಡಿ ದರ ಕಡಿತಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಚಿಂತನೆ ನಡೆಸಿದೆ.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಮಾತನಾಡಿ, ಹಣದುಬ್ಬರ ಪ್ರಮಾಣ ತಗ್ಗಿದರೆ ಬಡ್ಡಿ ದರ ಇಳಿಸಲು ಅವಕಾಶ ಸೃಷ್ಟಿಯಾಗಬಹುದು ಎಂದು ಹೇಳಿದ್ದಾರೆ.
ಸದ್ಯಕ್ಕೆ ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕ್ ಸುರಕ್ಷಿತ ಮಟ್ಟವನ್ನು ಮೀರಿದೆ. ಅಕ್ಟೋಬರ್ 7 ರಿಂದ 9 ರ ವರೆಗೆ ಸಭೆ ನಡೆಸಿದ ಆರ್ಬಿಐ ಹಣಕಾಸು ಸಮಿತಿ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ.
2020 -21ನೇ ಮೊದಲ ತ್ರೈಮಾಸಿಕದಲ್ಲಿ ಕುಸಿತ ಕಂಡಿದ್ದ ಆರ್ಥಿಕತೆ ಬೆಳವಣಿಗೆ ಎರಡನೇ ತ್ರೈಮಾಸಿಕದಲ್ಲಿ ಸುಧಾರಿಸುವತ್ತ ಹೆಜ್ಜೆ ಹಾಕಿದೆ. ಈ ಬಾರಿ ಉತ್ತಮ ಮುಂಗಾರಿನ ಕಾರಣ ಹಣದುಬ್ಬರ ಇಳಿಕೆಯಾಗುವ ನಿರೀಕ್ಷೆ ಇದೆ ಹಾಗಾಗಿ. ಹಣದುಬ್ಬರ ಪ್ರಮಾಣ ಕಡಿಮೆಯಾದರೆ ಬಡ್ಡಿ ದರ ಇಳಿಸಲು ಅವಕಾಶ ಸೃಷ್ಟಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.