alex Certify ಕಡಿಮೆ ಮೌಲ್ಯದ ವೈನ್​ ಆರ್ಡರ್​ ಮಾಡಿದ್ದ ದಂಪತಿಗೆ ಸಿಕ್ಕಿದ್ದೇನು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಮೌಲ್ಯದ ವೈನ್​ ಆರ್ಡರ್​ ಮಾಡಿದ್ದ ದಂಪತಿಗೆ ಸಿಕ್ಕಿದ್ದೇನು ನೋಡಿ

1300 ರೂಪಾಯಿ ಮೌಲ್ಯದ ವೈನ್​ ಬಾಟಲಿಗಳನ್ನ ಆರ್ಡರ್​ ಮಾಡಿದ ದಂಪತಿಗೆ ರೆಸ್ಟೋರೆಂಟ್​ ಸಿಬ್ಬಂದಿ ಬರೋಬ್ಬರಿ 1.47 ಲಕ್ಷ ಮೌಲ್ಯದ ವೈನ್​ ಬಾಟಲಿಗಳನ್ನ ನೀಡಿದ ಘಟನೆ ನ್ಯೂಯಾರ್ಕ್​ನಲ್ಲಿ ನಡೆದಿದೆ. ಇನ್ನು 1.47 ಲಕ್ಷ ಮೌಲ್ಯದ ವೈನ್​ ಆರ್ಡರ್​ ಮಾಡಿದ ವಾಲ್​ಸ್ಟ್ರೀಟ್​​​ ಉದ್ಯಮಿಗೆ ಕಡಿಮೆ ಮೌಲ್ಯದ ವೈನ್‌ ​ಗಳನ್ನ ನೀಡಲಾಗಿದೆ.

ರೆಸ್ಟೋರೆಂಟ್​​​ ಸಿಬ್ಬಂದಿಗೆ ತಮ್ಮಿಂದಾದ ತಪ್ಪಿನ ಬಗ್ಗೆ ಅರಿವಾಗ್ತಾ ಇದ್ದಂತೆ ಕೂಡಲೇ ಮಾಲೀಕ ಕೀತ್​​ಗೆ ಮಾಹಿತಿ ರವಾನಿಸಿದ್ದಾರೆ. ಆದರೆ ಇಬ್ಬರು ಗ್ರಾಹಕರು ಖುಷಿಯಾಗೇ ಇರೋದನ್ನ ನೋಡಿ ಮಾಲೀಕ ಕೀತ್​ ಗೊಂದಲಕ್ಕೆ ಒಳಗಾಗಿದ್ದಾರೆ.

ಬಳಿಕ ಈ ವಿಷಯವನ್ನ ಉದ್ಯಮಿಗೆ ಹೇಳಲಾಯ್ತು. ಆದರೆ ಅವ್ರು ಕೂಡ ಯಾವುದೇ ತೊಂದರೆ ಮಾಡಲಿಲ್ಲ. ಆದರೆ ದಂಪತಿ ಮಾತ್ರ ರೆಸ್ಟೋರೆಂಟ್​ ​ನ ಈ ತಪ್ಪಿನಿಂದ ಭಾರಿ ಖುಷಿಯಾಗಿದ್ರು. ಬ್ಯಾಂಕ್​ ತಪ್ಪಾಗಿ ಹಣ ಕಳಿಸಿದ್ರೆ ಎಷ್ಟು ಖುಷಿಯಾಗುತ್ತೋ ಅಷ್ಟು ಸಂತೋಷವಾಯ್ತು ಅಂತಾ ಹೇಳಿದ್ರು. ಆದರೆ ಇಲ್ಲಿ ತಪ್ಪು ಮಾಡಿದ್ದು ಬ್ಯಾಂಕ್​ ಅಲ್ಲ. ಬದಲಾಗಿ ನಾನು ಅಂತಾ ಕೀತ್​ ತಮ್ಮ ಇನ್ಸ್ಟಾಗ್ರಾಂನಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು 2000ನೇ ಇಸ್ವಿಯಲ್ಲಿ ಅಂತಾನೂ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...